ಸೋಮವಾರ, 26 ಅಕ್ಟೋಬರ್ 2026
Trending

ಉಪ್ಪಿನಂಗಡಿ: ಪ್ರಯಾಣಿಕರ ತಂಗುದಾಣದ ಮೇಲೆ ಕುಸಿದು ಬಿದ್ದ ತಡೆಗೋಡೆ

ಉಪ್ಪಿನಂಗಡಿ: ಬಸ್‌ನಿಲ್ದಾಣದ ಬಳಿಯ ಬಿಎಸ್‌ಎನ್‌ಎಲ್‌ ಕಚೇರಿಯ ತಡೆಗೋಡೆ ಪ್ರಯಾಣಿಕರ ತಂಗುದಾಣಕ್ಕೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್‌ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

Sponsored

ಬಿಎಸ್‌ಎನ್‌ಎಲ್‌ ಅಧೀನದ ಕಚೇರಿ ಹಾಗೂ ಟವರ್‌ ಇರುವ ಪ್ರದೇಶದ ಸುರಕ್ಷತೆಗೆ ಎಂಟು ಅಡಿಗಿಂತಲೂ ಎತ್ತರದ ಆವರಣ ಗೋಡೆಯನ್ನು ನಿರ್ಮಿಸಲಾಗಿದ್ದು, ಕಳೆದೆರಡು ದಿನಗಳಲ್ಲಿ ಸುರಿದ ಮಳೆಯಿಂದ ಆವರಣಗೋಡೆಯ ಬುಡ ದುರ್ಬಲಗೊಂಡು, ಶನಿವಾರ ರಾತ್ರಿ ಸನಿಹದಲ್ಲೇ ಇದ್ದ ಬಸ್‌ ನಿಲ್ದಾಣದ ಪ್ರಯಾಣಿಕರು ಕುಳಿತುಕೊಳ್ಳುವ ಕಟ್ಟಡದ ಮೇಲೆ ಕುಸಿದು ಬಿದ್ದಿದೆ.

Advertisement
Advertisement

ತಡೆಗೋಡೆ ಕುಸಿತಗೊಂಡಾಗ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಓಡಿಹೋಗಿ ಅಪಾಯದಿಂದ ಪಾರಾಗಿದ್ದಾರೆ.

Advertisement