ಶನಿವಾರ, 24 ಅಕ್ಟೋಬರ್ 2026

49 ಕೋಟಿ ರೂ. ಲಾಟ್ರಿ ಗೆದ್ದ ಉಡುಪಿಯ ಯುವಕ

ಉಡುಪಿ: ಓಮನ್‌ನಲ್ಲಿ ಚಿಲ್ಲರೆ ವ್ಯಾಪಾರದ ಸೇಲ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಶಂತನು ಶೆಟ್ಟಿಗಾರ್‌ ಅಬುಧಾಬಿಯಲ್ಲಿ ನಡೆದ ಬಿಗ್‌ ಟೆಕೆಟ್‌ ಡ್ರಾನಲ್ಲಿ 49 ಕೋಟಿ ರೂ ಮೊತ್ತದ ಲಾಟರಿ ಗೆದ್ದಿದ್ದಾರೆ.

ಶಂತನು (33) ಉದ್ಯಾವರ ಮೂಲದವರಾಗಿದ್ದು, ಓಮನ್‌ನಲ್ಲಿ ರಿಟೇಲ್‌ ವಲಯದ ಉದ್ಯೋಗ ಮಾಡುತ್ತಿದ್ದು, ಜ.20 ರಂದು ಬಿಗ್‌ಟೆಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿ ಮಾಡಿದ್ದರು. ಫೆ.3 ರಂದು ಬಿಗ್‌ ಟಿಕೆಟ್‌ ಡ್ರಾ ಆಗಿದ್ದು, ಇದರಲ್ಲಿ ಶಂತನು ಅವರ ಅದೃಷ್ಟ ಖುಲಾಯಿಸಿದೆ.

ಶಂತನು ತನ್ನ ಸ್ನೇಹಿತರ ಜೊತೆ ಸೇರಿ ಜಂಟಿ ಟಿಕೇಟ್‌ ಖರೀದಿ ಮಾಡಿದ್ದರು. ಹೀಗಾಗಿ ಒಟ್ಟು 49 ಕೋಟಿ ರೂ. ನಲ್ಲಿ ಇಬ್ಬರೂ ತಲಾ 24.5 ಕೋಟಿ ರೂ. ಹಂಚಿಕೊಳ್ಳಲು ನಿರ್ಧರಿಸಿರುವುದಾಗಿ ಸ್ವತಃ ಶಂತನು ಹೇಳಿಕೊಂಡಿದ್ದಾನೆ. ಇನ್ನು ಉದ್ಯಾವರ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ಶಂತನು ಶುಭಾಶಯಗಳನ್ನು
ತಿಳಿಸುತ್ತಿದ್ದಾರೆ.

2021ರಿಂದಲೂ ಬಿಗ್‌ ಟಿಕೆಟ್‌ ರಾಫಲ್‌ಗಳಲ್ಲಿ ಭಾಗವಹಿಸುತ್ತಿದ್ದೆ. ಈ ಗೆಲುವು ತುಂಬಾ ಅನಿರೀಕ್ಷಿತವಾಗಿತ್ತು. ನನಗೆ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದಿರುವ ಶಂತನು, ಬಹುಮಾನದಿಂದ ಬಂದ ಹಣವನ್ನು ಹೇಗೆ ಬಳಸಬೇಕೆಂದು ಇದುವರೆಗೆ ಯೋಚಿಸಿಲ್ಲ ಎಂದಿದ್ದಾರೆ.

ಯುಎಇನಲ್ಲಿ ಬಿಗ್‌ ಟಿಕೆಟ್‌ ಡ್ರಾದಲ್ಲಿ ಜಾಕ್‌ಪಾಟ್‌ ಜೊತೆಗೆ ಹಲವು ಬಹುಮಾನಗಳು ಸೇರಿದ್ದವು. ಐದು ಜನಕ್ಕೆ ತಲಾ ದಿರ್‌ಹುಂ ಬಹುಮಾನದ ಜೊತೆಗೆ ಐಷರಾಮಿ ವಾಹನಗಳನ್ನು ನೀಡಲಾಗಿದೆ.