ಕಾಕ್ರೋಚ್ ಜನತಾ ಪಕ್ಷದ ವತಿಯಿಂದ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ತನ್ನನ್ನು 15 ವರ್ಷದವಳು ಎಂದು ಹೇಳುವ ರುಚಿಕಾ, ಆಡಿದ ಮಾತುಗಳು ಎಲ್ಲರನ್ನೂ ದಂಗುಬಡಿಸಿದ್ದವು. ದೇಶದ ಪ್ರಧಾನಿಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ತಾಯಿಯನ್ನೂ ಕೆಟ್ಟದ್ದಾಗಿ ಬೈದಿದ್ದಳು. ಇದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು. ಟ್ರೋಲ್ ಆದ ಬಳಿಕ, ವಿಡಿಯೋ ಮಾಡಿ ಕ್ಷಮೆ ಕೋರಿದ್ದಳು. ಆಕೆಯ ಅಮ್ಮ ಕೂಡ ವಿಡಿಯೋಮಾಡಿ, ಪ್ರತಿಭಟನಾಕಾರರು ನನ್ನಮಗಳ ಬ್ರೈನ್ವಾಷ್ ಮಾಡಿದ್ದರು. ಅದಕ್ಕೆ ಏನೂ ಅರಿಯದೇ ಹಾಗೆ ಮಾಡಿದ್ದಾಳೆ, ಕ್ಷಮಿಸಿ ಎಂದು ಹೇಳಿದರು.
ಅಷ್ಟಕ್ಕೂ ಮೋದಿಗೆ ಬೈದವಳೇ ಬೇರೆ, ಕ್ಷಮೆ ಕೋರುತ್ತಿರುವವಳೇ ಬೇರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು. ಇದಕ್ಕೆ ಕಾರಣ, ಇಬ್ಬರ ನಡುವೆ ಇರುವ ವ್ಯತ್ಯಾಸ. ಕ್ಷಮೆ ಕೋರಿದಾಗ ಚಿಕ್ಕ ಬಾಲಕಿಯ ಹಾಗೆ ಇದ್ದರೆ, ಈಗ ಮಾತನಾಡ್ತಿರೋಳು ಯುವತಿಯ ಹಾಗೆ ಇದ್ದಾಳೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾಟಕವಾಡುತ್ತಿದ್ದಾರೆ ಎಂದೇ ಹೇಳಲಾಗಿತ್ತು. ಅಲ್ಲದೆ ಈ ವಿಷಯದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದ ಪ್ರಧಾನಿ, ಮಕ್ಕಳಲ್ವಾ, ಇರಲಿ ಎಲ್ಲರನ್ನೂ ಕ್ಷಮಿಸಿದ್ದೇನೆ ಎಂದಿದ್ದರು. ಅಲ್ಲಿಗೆ ವಿಷಯ ತಣ್ಣಗಾಯಿತು.
ವಿಷಯ ತಣ್ಣಗಾಗುತ್ತಿದ್ದಂತೆಯೇ ಮತ್ತೆ ಚಿಗುರಿಕೊಂಡಿದ್ದಾಳೆ ಬಾಲಕಿ. ಮತ್ತೊಂದು ವಿಡಿಯೋ ಮಾಡಿರುವ ಈಕೆ, ಪ್ರಧಾನಿಗೆ ಮತ್ತೆ ಬೈದಿದ್ದಾಳೆ. ನೀವು ನನ್ನ ಜೀವನವನ್ನು ನರಕ ಮಾಡಿದ್ದೀರಿ. ಎಲ್ಲಿಯೂ ನಾನು ಹೋಗುವ ಹಾಗೆ ಇಲ್ಲ. ನನ್ನಂಥ ಚಿಕ್ಕವಳಿಗೆ ಸಿಕ್ಕಾಪಟ್ಟೆ ಟಾರ್ಚರ್ ಕೊಡುತ್ತಿದ್ದೀರಿ. ಈಗ ನನ್ನ ಬಳಿ ಕಳೆದುಕೊಳ್ಳಲು ಏನೂ ಇಲ್ಲ. ನನಗೆ ಸ್ವಾತಂತ್ರ್ಯ ಇಲ್ಲವಾಗಿದೆ. ಮುಖ ಮುಚ್ಚಿಕೊಂಡು ಇರಬೇಕಾದ ಸ್ಥಿತಿ ಬಂದಿದೆ. ಎಲ್ಲವೂ ನಿಮ್ಮಿಂದ ಎಂದಿದ್ದಾಳೆ.
ಇದಕ್ಕೆ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದ್ದು, ಇಂಥವರನ್ನು ಸುಮ್ಮನೇ ಬಿಡುತ್ತಿರುವುದೇ ದೊಡ್ಡ ತಪ್ಪು ಎನ್ನುತ್ತಿದ್ದಾರೆ. ಈ ಬಾಲಕಿ ವಿನಾಕಾರಣ, ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತಿದ್ದಾಳೆ. ತನ್ನ ಹೆಸರು ಸೈಡ್ಲೈನ್ ಆಗಿರುವುದಕ್ಕೆ ಮತ್ತೆ ಸುದ್ದಿಯಲ್ಲಿ ಇರಲು ಬಯಸುತ್ತಿದ್ದಾಳೆ ಎಂದಿರುವ ನೆಟ್ಟಿಗರು, ಈಗ ಅಮ್ಮ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ.



