ಶನಿವಾರ, 24 ಅಕ್ಟೋಬರ್ 2026

5 ದಿನದಲ್ಲಿ ‘ಟಾಕ್ಸಿಕ್’ ಗಳಿಸಿದ್ದೆಷ್ಟು?

ಕನ್ನಡಿಗರ ಬಹು ನಿರೀಕ್ಷಿತ ಸಿನಿಮಾ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ ತೆರೆ ಕಂಡು 5 ದಿನಗಳಾಗಿದ್ದು, ಜನರಿಂದ ಭಾರೀ ರೆಸ್ಪಾನ್ಸ್ ಪಡೆಯುತ್ತಿದೆ. ಹಾಗಿದ್ರೆ ಐದು ದಿನದಲ್ಲಿ ಈ ಸಿನಿಮಾದ ಗಳಿಕೆ ಎಷ್ಟು? 

ಭಾರತದಲ್ಲಿ ‘ಟಾಕ್ಸಿಕ್’ ಸಿನಿಮಾದ ಗ್ರಾಸ್ ಕಲೆಕ್ಷನ್ 255.95 ಕೋಟಿಗೆ ತಲುಪಿದ್ದು, ನೆಟ್ ಕಲೆಕ್ಷನ್ 214.10 ಕೋಟಿ ರೂಪಾಯಿಯಷ್ಟಾಗಿದೆ. ವಿದೇಶದಲ್ಲೂ ಸಿನಿಮಾ ಸಾಧಾರಣ ಗಳಿಕೆ ಕಾಣುತ್ತಿದ್ದು, 5ನೇ ದಿನ 2.00 ಕೋಟಿ ರೂಪಾಯಿ ಬಾಚಿಕೊಂಡಿದ್ದು, ಈ ಮೂಲಕ ಒಟ್ಟು ವಿದೇಶಿ ಗಳಿಕೆ 29.25 ಕೋಟಿ ರೂಪಾಯಿಗೆ ಏರಿಸಿಕೊಂಡಿದೆ. ಹೀಗಾಗಿ ‘ಟಾಕ್ಸಿಕ್’ ಜಾಗತಿಕವಾಗಿ ಬರೋಬ್ಬರಿ 285.20 ಕೋಟಿ ಕಲೆಕ್ಷನ್ ಮಾಡಿದೆ.

ಇನ್ನೂ ದಿನ ಕಳೆದಂತೆ ಕಲೆಕ್ಷನ್ ಹಾಗೂ ಥಿಯೇಟರ್‌ಗಳಲ್ಲಿ ಆಕ್ಯುಪೆನ್ಸಿ ಕ್ರಮೇಣ ಕುಗ್ಗುತ್ತಿರೋದು ಚಿತ್ರತಂಡ ಹಾಗೂ ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.