ಭಾನುವಾರ, 25 ಅಕ್ಟೋಬರ್ 2026

ಕೇತನ್‌ ಕೊಲೆ ನಡೆದ ಜಾಗ ನೋಡ್ಬೇಕು-ಲೋಹಗಡ್‌ ಕೋಟೆಗೆ ಪ್ರವಾಸಿಗರ ಸಂಖ್ಯೆ ಶೇ.50 ರಷ್ಟು ಏರಿಕೆ

ಮುಂಬೈ: ಭಾವಿ ಪತ್ನಿಯಿಂದ ಹತ್ಯೆಗೀಡಾದ ಉದ್ಯಮಿ ಕೇತನ್‌ ಪ್ರಕರಣಕ್ಕೆ ಕುರಿತಂತೆ ಇದೀಗ ಕೊಲೆ ನಡೆದ ಜಾಗವು ಜನರಲ್ಲಿ ಭಾರೀ ಸುದ್ದಿಯಾಗುತ್ತಿದೆ. ಸಿಯಾ ಗೋಯೆಲ್‌ ತನ್ನ ಭಾವಿ ಪತಿ ಕೇತನ್‌ನನ್ನು ಹತ್ಯೆ ಮಾಡಿದ ಜಾಗವನ್ನು ನೋಡುವುದಕ್ಕೆ ಲೋಹಗಡ್‌ ಕೋಟೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿಢಿರ್‌ ಏರಿಕೆ ಕಂಡಿದೆ.

Sponsored

10ನೇ ಶತಮಾನದ ಹಿಂದಿನ ಕೋಟೆಯಾಗಿದ್ದು, ಛತ್ರಪತಿ ಶಿವಾಜಿ ಮಾಹಾರಾಜರೊಂದಿಗೆ ಸಂಬಂಧ ಹೊಂದಿದೆ. ಅಲ್ಲದೆ ಯುನೆಸ್ಕೋ ಮಾನ್ಯತೆ ಪಡೆದ ತಾಣವಾಗಿದ್ದು, ಭೂ ದೃಶ್ಯಗಳು ಬಹಳಷ್ಟಿದೆ. 2,3 ಗಂಟೆಗಳ ಕಾಲ ಚಾರಣ ಮಾಡಬಹುದಾದ ಪ್ರದೇಶ ಇದಾಗಿದೆ.

Marriage AdMarriage AdSponsored

ಪುಣೆಯಿಂದ ಸುಮಾರು 50 ಕಿ.ಮೀ.ದೂರದಲ್ಲಿರುವ ಐಕಾನಿಕ್‌ ಲೋಹಗಡ್‌ ಕೋಟೆಗೆ ಭೇಟಿ ನೀಡುವ ಜನರ ಸಂಖ್ಯೆ ಸಾಮಾನ್ಯಕ್ಕಿಂತ 50% ರಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಜಾ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ 1000 ಇತ್ತು. ಇದೀಗ 1500 ಕ್ಕೆ ಏರಿದೆ.