Home » ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ಇoದ್ರಪ್ರಸ್ಥ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ಇoದ್ರಪ್ರಸ್ಥ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

0 comments

ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ಪುತ್ತೂರು ತಾಲೂಕು ಮಟ್ಟದ 15 ಹಾಗೂ 17ರ ವಯೋಮಾನದ ಬಾಲಕ – ಬಾಲಕಿಯರ ವಾಲಿಬಾಲ್ ಪಂದ್ಯಾಟ ಬೆಥನಿ ಪ್ರೌಢಶಾಲೆ ಪಾಂಗ್ಲಾಯಿ ಪುತ್ತೂರು ಇಲ್ಲಿ ಸೆ. 11ರಂದು ನಡೆಯಿತು.

ಈ ಪಂದ್ಯಾಟದಲ್ಲಿ 17ರ ವಯೋಮಾನದ ಬಾಲಕರ ವಿಭಾಗ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 10ನೇ ತರಗತಿಯ ಆಯತುಲ್ಲಾ ಸಲೀಂ ಬೆಸ್ಟ್ ಅಟ್ಯಾಕರ್ ಹಾಗೂ 10ನೇ ತರಗತಿಯ ಪ್ರೀತಮ್ ಉತ್ತಮ ಪಾಸರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹಲವು ವರ್ಷಗಳ ಗೆಲುವಿನ ಕನಸನ್ನು ನನಸು ಮಾಡಿದ ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಸಂಚಾಲಕರು, ಶಾಲಾ ಮುಖ್ಯಸ್ಥೆ ವೀಣಾ ಆರ್ ಪ್ರಸಾದ್ ಮತ್ತು ಶಿಕ್ಷಕ ವೃಂದದವರು ಪ್ರಶಂಸಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You may also like