ಸೋಮವಾರ, 26 ಅಕ್ಟೋಬರ್ 2026
Trending

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣನ ಆರ್ಭಟ!

Image Credit: Tv9 Kannada

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಚಾತುರ್ಯ ನಡೆದಿದೆ. ಬೆಳ್ಳಿಯ ಅಂಬಾರಿ ಹೊತ್ತ ಆನೆ ಸೋಮಣ್ಣನನ್ನು ಹಿಡಿಯಲು ಅರಣ್ಯ ಇಲಾಖೆಯವರು ಹರ ಸಾಹಸ ಪಟ್ಟಿರುವ ಘಟನೆ ನಡೆದಿದೆ. ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ದಾಟುತ್ತಿದ್ದಂತೆ ಸೋಮಣ್ಣ ಆನೆ ಹೆದರಿದ್ದು, ಮಾವುತರು, ಕಾವಾಡಿಗರು ಆನೆಯನ್ನು ನಿಯಂತ್ರಣ ಮಾಡಲು ಹರಸಾಹಸ ಪಟ್ಟಿದ್ದಾರೆ.

Sponsored

ಜನರನ್ನು ನೋಡಿದ ಆನೆ ಹೆದರಿ ದೌಡಾಯಿಸಿದ ಸೋಮಣ್ಣನ ಆರ್ಭಟಕ್ಕೆ ಕಾರೊಂದು ಜಖಂಗೊಂಡಿದೆ. ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಿಂದ ಫ್ರೀಡಂ ಪಾರ್ಕ್‌ನತ್ತ ಹೊರಟಿದ್ದ ವೇಳೆ ಘಟನೆ ನಡೆದಿದೆ.

ಸೋಮಣ್ಣ ಇದೇ ಮೊದಲ ಬಾರಿಗೆ ಬೆಳ್ಳಿ ಅಂಬಾರಿ ಹೊತ್ತಿದ್ದಾನೆ. ಈ ಆನೆ ಆರ್ಭಟದಲ್ಲಿ ಚಾಮುಂಡೇಶ್ವರಿ ಮೂರ್ತಿ ಇದ್ದ ಬೆಳ್ಳಿಯ ಅಂಬಾರಿ ಕೆಳಕ್ಕೆ ಬಿದ್ದು ಹಾನಿಗೊಳಗಾಯಿತು.  ದಸರಾ ಸವಾರಿ ನೋಡಲು ನಿಂತಿದ್ದ ಜನರೆಲ್ಲ ಭಯಭೀತರಾಗಿ ಚದುರಿ ಹೋದರು.