ಶನಿವಾರ, 24 ಅಕ್ಟೋಬರ್ 2026

ಮಂಗಳೂರಿಗೆ ಬಂತು ಎಲ್‌ಪಿಜಿ ಹೊತ್ತ ಹಡಗು

ಮಂಗಳೂರು: ನವಮಂಗಳೂರು ಬಂದರಿಗೆ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿದೆ. 16,000 ಮೆಟ್ರಿಕ್‌ ಟನ್‌ ಎಲ್‌ಪಿಜಿ ಇರುವ ಅಪೋಲೋ ಓಷನ್‌ ಹೆಸರಿನ ಹಡಗು ಮಂಗಳೂರಿಗೆ ಬಂದಿದ್ದು, ಇಳಿಸುವ ಕಾರ್ಯಾಚರಣೆಗಳು ನಡೆಯುತ್ತಿದೆ.

ಕತಾರಿನ ರಾಸ್‌ ಲಫಾನ್‌ನಿಂದ 46 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತ ಶಿವಾಲಿಕ್‌ ಸರಕು ಹಡಗು ಗುಜರಾತಿನ ಮುಂದ್ರಾ ಬಂದರಿಗೆ ಮಾ.16 ಕ್ಕೆ ಬಂದಿದ್ದು, ನಂತರ ಮಂಗಳೂರಿಗೆ ಬರಬೇಕಿತ್ತು. ಆದರೆ ಶಿವಾಲಿಕ್‌ನಲ್ಲಿದ್ದ ಎಲ್ಲಾ ಸರಕನ್ನು ಗುಜರಾತಿಯ ಮುದ್ರಾ ಬಂದರಿನಲ್ಲಿ ಇಳಿಸಲಾಗಿತ್ತು. ಅಲ್ಲಿಂದ 16,000 ಮೆಟ್ರಿಕ್‌ ಟನ್‌ ಎಲ್‌ಪಿಜಿಯನ್ನು ಅಪೊಲೀ ಓಷನ್‌ ಹಡಗಿಗೆ ತುಂಬಿಸಲಾಗಿತ್ತು.

ಬಂದರು ಅಧಿಕಾರಿಗಳು ಇನ್ನೂ ಎರಡು ಕಚ್ಛಾತೈಲ ಟ್ಯಾಂಕರ್‌ಗಳು ಶೀಘ್ರದಲ್ಲಿಯೇ ಮಂಗಳೂರಿಗೆ ಬರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.