ಶನಿವಾರ, 24 ಅಕ್ಟೋಬರ್ 2026

Viral Video : ರಸ್ತೆ ಬದಿಯಲ್ಲಿ 2 ಗಂಟೆ ಚಲನೆ ಇಲ್ಲದೆ ಕಲ್ಲಿನಂತೆ ನಿಂತ ಡೆಲಿವರಿ ಬಾಯ್ – ಭಾರತಕ್ಕೆ ಕಾಲಿಟ್ಟಿತೇ ಆ ಭಯಾನಕ ಮಾದಕ ದ್ರವ್ಯ?

Viral Video : ಕೆಲವು ಸಮಯದಿಂದ ಚಂಡೀಗಢದ್ದು ಎನ್ನಲಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದ್ದು, ಅದರಲ್ಲಿ ಒಬ್ಬ ಬ್ಲಿಕಿಂಟ್​ ಡೆಲಿವರಿ ಹುಡುಗ ಬಾಯಲ್ಲಿ ಬೀಡಿಯನ್ನು ಇಟ್ಟುಕೊಂಡು ರಸ್ತೆ ಬದಿಯಲ್ಲಿ ಸುಮಾರು ಎರಡರಿಂದ ಮೂರು ಗಂಟೆ ಒಂದೇ ಸ್ಥಳದಲ್ಲಿ ನಿಂತಿರುವುದು ಕಂಡುಬಂದಿದ್ದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. 

ಟ್ವೀಟರ್’ನಲ್ಲಿ ಹಂಚಿಕೊಂಡ ಪೋಸ್ಟ್’ನಲ್ಲಿ, ಖಲಿಸ್ತಾನಿಗಳ ಸಹಾಯದಿಂದ ಪಾಕಿಸ್ತಾನವು ಭಾರತದಲ್ಲಿಯೂ ಫೆಂಟನಿಲ್ ಹರಡುತ್ತಿದೆ. ಅಂದ್ಹಾಗೆ, ಇದು ಅಮೆರಿಕದ ಬೀದಿಗಳನ್ನ ನಾಶಪಡಿಸಿದ ಅತ್ಯಂತ ಅಪಾಯಕಾರಿ ಮಾದಕ ವಸ್ತುವಾಗಿದೆ” ಎಂದು ಬರೆಯಲಾಗಿದೆ.

ಈ ವಿಡಿಯೋ ವೈರಲಾಗುತ್ತಿದ್ದಂತೆ ಕೆಲವರು ಇದೊಂದು ಜೋಂಬಿ ವೈರಸ್​, ಇದು ಅಮೆರಿಕ ಮತ್ತು ಇತರೆ ಯುರೋಪಿಯನ್​ ದೇಶಗಳಲ್ಲಿ ಇದನ್ನು ನೋಡಬಹುದು ಎಂದು ಹೇಳಿದ್ದಾರೆ. ಇನ್ನು ಕೆಲವರು ಇದು ಮಾದಕ ವಸ್ತುಗಳ ಅತಿಯಾದ ಬಳಕೆಯಿಂದ ಉಂಟಾಗುವ ಸ್ಥಿತಿ, ಪಂಜಾಬ್​ ಮತ್ತು ಚಂಡೀಗಢದ ಯುವಕರು ಈ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ದುಃಖದ ಸಂಗತಿ ಎಂದು ಹೇಳಿದ್ದಾರೆ.

ಇನ್ನು ಬಹುಶಃ ಇವನು ಮಾನಸಿಕ ಅಸ್ವಸ್ಥನಿರಬೇಕು, ಈ ರೀತಿಯ ಜನರನ್ನು ಡೆಲವರಿ ಕೆಲಸಕ್ಕೆ ತೆಗೆದುಕೊಳ್ಳುವುದು ತಪ್ಪು. ಒಂದು ವೇಳೆ ಡೆಲವರಿ ಸಂದರ್ಭದಲ್ಲಿ ಜನರ ಮೇಲೆ ಹಲ್ಲೆಗೆ ಮುಂದಾದರೆ ಯಾರು ಹೊಣೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಆದರೆ ಈ ವ್ಯಕ್ತಿ ಯಾರು? ಯಾಕೆ ಹೀಗೆ ಒಂದೇ ಸ್ಥಳದಲ್ಲಿ ತನ್ನ ಮೇಲೆ ಹಿಡಿತ ಕಳೆದುಕೊಂಡು ನಿಂತಿದ್ದ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಇಲ್ಲಿವರೆಗೆ ದೊರೆತಿಲ್ಲ.