ಚೆನ್ನೈ: ಹೊಸ ಸಂಸತ್ ಭವನದಲ್ಲಿ ನಿರ್ಮಿಸಲಾಗಿರುವ ʼಸೆಂಗೋಲ್ʼ (ರಾಜದಂಡ) ಅನ್ನು ವಿನ್ಯಾಸ ಮಾಡಿ ನಿರ್ಮಿಸಿದ್ದ ಭಾರತದ ಖ್ಯಾತ ಆಭರಣಕಾರ ವುಮ್ಮಿಡಿ ಯತಿರಾಜ್ (99) ಅವರು ಚೆನ್ನೈನಲ್ಲಿ ಬುಧವಾರ ನಿಧನ ಹೊಂದಿದ್ದಾರೆ.
Sponsoredಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಸೇರಿದಂತೆ ಇತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
125 ವರ್ಷಗಳ ಇತಿಹಾಸವಿರುವ ಪ್ರಸಿದ್ಧ ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್ ಸಂಸ್ಥೆಯ ಯತಿರಾಜ್ ಅವರು ಕೊನೆಯುಸಿರೆಳೆದಿದ್ದು, ಭಾರತದ ಮೊದಲ ಪ್ರಧಾನಿ ನೆಹರುಗೆ ಹಸ್ತಾಂತರಿಸಲಾಗಿದ್ದ ಐತಿಹಾಸಿಕ ಸೆಂಗೋಲ್ ಅನ್ನು ತಯಾರಿಸುವಲ್ಲಿ ಯತಿರಾಜ್ ಶ್ರಮ ಸ್ಮರಣೀಯ ಎಂದು ಸ್ಮರಿಸಿದ್ದಾರೆ ಎಂದು ಎಕ್ಸ್ನಲ್ಲಿ ಪ್ರಧಾನಿ ಮೋದಿ ಬರೆದಿದ್ದಾರೆ.





