ಸೋಮವಾರ, 26 ಅಕ್ಟೋಬರ್ 2026
Trending

ಸವಣೂರು: ಉಲಾಯಿ-ಪಿದಾಯಿ ಜೂಜಾಟ, ಪೊಲೀಸರ ದಾಳಿ: ಐವರು ವಶಕ್ಕೆ

Karnataka
Image source: Deccan herald

ಬೆಳ್ಳಾರೆ: ಸಾರ್ವಜನಿಕ ಸ್ಥಳದಲ್ಲಿ ಉಲಾಯಿ ಪಿದಾಯಿ ಜೂಜಾಟ ಆಡುತ್ತಿದ್ದ ಐವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅ.20 ರಂದು ಸಂಜೆ ಬೆಳ್ಳಾರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಸವಣೂರು ಕುವತ್ತೋಡಿ ಎಂಬಲ್ಲಿ ಜೂಜಾಟ ನಡೆಯುತ್ತಿರುವ ಮಾಹಿತಿ ಪಡೆದ ಬೆಳ್ಳಾರೆ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಈರಯ್ಯ ಡಿ.ಎನ್‌ ಅವರು ಸಿಬ್ಬಂದಿಗಳ ಜೊತೆ ದಾಳಿ ನಡೆಸಿದರು.

Sponsored

ಗುರುವ, ಇಸೂಬು, ಕುಶಾಲಪ್ಪ, ತಾಜುದೀನ್‌ ಹಾಗೂ ರಾಮಣ್ಣ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಜೂಜಾಟಕ್ಕೆ ಬಳಸಲಾಗಿದ್ದ ರೂ.18,150 ನಗದು, ಇಸ್ಪೀಟು ಎಲೆಗಳು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

Advertisement