ಪುತ್ತೂರು: ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ
ಪುತ್ತೂರು: ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಒಡ್ಡಿ ಹಲ್ಲೆ ಮಾಡಿರುವ ಘಟನೆ ಅ.17 ರ ರಾತ್ರಿ ನಡೆದಿದೆ.
Sponsoredಕಡಬದ ಕೊಯಿಲ ನಿವಾಸಿ ಮಹಮ್ಮದ್ ರಿಫಾಯಿ (27) ಹಲ್ಲೆಗೊಳಗಾದ ವ್ಯಕ್ತಿ.
ಪುತ್ತೂರಿನ ಲಾಡ್ಜ್‌ವೊಂದರಲ್ಲಿ ಮಹಮ್ಮದ್ ರಿಫಾಯಿ ಅವರು ಕೆಲಸ ಮಾಡುತ್ತಿದ್ದರು. ಅ.17 ರಂದು ರಾತ್ರಿ ಲಾಡ್ಜ್‌ನಲ್ಲಿದ್ದ ವೇಳೆ ಫಾರೂಕ್, ಸೋನು ಹಾಗೂ ಇಷಾನ್ ಎಂಬುವವರು ಬಂದು ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮಹಮ್ಮದ್ ರಿಫಾಯಿ ನೀಡಿದ ದೂರಿನನ್ವಯ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




