ಭಾನುವಾರ, 25 ಅಕ್ಟೋಬರ್ 2026
Trending

ನಾಸಿಕ್-ತ್ರ್ಯಂಬಕೇಶ್ವರ ಕುಂಭಮೇಳ: ವೆಬ್‌ಸೈಟ್‌ ಅನಾವರಣ, ಸಂಪೂರ್ಣ ಮಾಹಿತಿ ಇಲ್ಲಿದೆ

ನಾಸಿಕ್-ತ್ರ್ಯಂಬಕೇಶ್ವರದಲ್ಲಿ ಸಿಂಹಸ್ಥ ಕುಂಭಮೇಳಕ್ಕಾಗಿ ಅಧಿಕೃತ ವೆಬ್‌ಪೋರ್ಟಲ್‌ ಸಿದ್ಧಪಡಿಸಲಾಗುತ್ತಿದ್ದು, ಇದರ ಪ್ರಾಥಮಿಕ ಆವೃತ್ತಿಯನ್ನು ಅ.31 ರಂದು ನಡೆಯುವ ಧ್ವಜಾರೋಹಣ ಸಮಾರಂಭದಲ್ಲಿ ಅನಾವರಣಗೊಳಿಸಲಾಗುವುದು ಎಂದು ನಾಶಿಕ್-ತ್ರ್ಯಂಬಕೇಶ್ವರ ಕುಂಭಮೇಳ ಪ್ರಾಧಿಕಾರ ತಿಳಿಸಿದೆ.

Sponsored

ಕುಂಭಮೇಳವು ಅ.31 ರಿಂದ 2028 ರ ಮಧ್ಯದವರೆಗೆ ನಡೆಯಲಿದ್ದು, 2027 ರಲ್ಲಿ ಪ್ರಮುಖ ಶಾಹಿ ಸ್ನಾನದ ದಿನಾಂಕಗಳಿದೆ.

ಈ ಪೋರ್ಟಲ್‌ನಲ್ಲಿ ಸ್ನಾನದ ದಿನಾಂಕ, ಪ್ರಯಾಣ ಮಾಹಿತಿ, ಸೌಲಭ್ಯಗಳು, ಸುರಕ್ಷತ ಸೂಚನೆಗಳು, ದೇವಸ್ಥಾನ, ಘಾಟ್‌, ಅಖಾಡಗಳ ವಿವರ, ಪಾರ್ಕಿಂಗ್‌, ಸಂಚಾರ ಮಾರ್ಗ, ಆಸ್ಪತ್ರೆ, ಪೊಲೀಸ್‌ ವ್ಯವಸ್ಥೆಯೊಂದಿಗೆ ಕೇಂದ್ರಗಳ ಮಾಹಿತಿ ಲಭ್ಯವಿರಲಿದೆ.

ಮೊಬೈಲ್‌ ಸಿಗ್ನಲ್‌ ಕಡಿಮೆಯಿದ್ದರೂ ಈ ಪೋರ್ಟಲ್‌ ಕೆಲಸ ನಿರ್ವಹಿಸುತ್ತದೆ. ಅದಕ್ಕಾಗಿ ಬಹುಭಾಷಾ ಸೌಲಭ್ಯ, ವಿನ್ಯಾಸ, ವರ್ಚುವಲ್‌ ಪ್ರವಾಸ, ಲೈ ಸ್ಟ್ರೀಮ್‌ ಲಿಂಕ್‌ಗಳೂ ಇರಲಿದೆ. ಮೊಬೈಲ್‌ ಆಪ್‌ ಮತ್ತು ಎಐ ಆಧಾರಿತ ಕುಂಭದೂತ್‌ ಸಹಾಯ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿರಲಿದೆ ಎಂದು ಪ್ರಕಟಣೆ ತಿಳಿಸಿದೆ.