ಸೋಮವಾರ, 26 ಅಕ್ಟೋಬರ್ 2026
Trending

ಸಿದ್ದರಾಮಯ್ಯ ಸ್ಟಿಂಗ್‌ ಪ್ರಕರಣ: ಖಾಸಗಿ ವಾಹಿನಿ ಮುಖ್ಯಸ್ಥ ವಶಕ್ಕೆ, ಬಿಡುಗಡೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಮತ್ತು ಸ್ಟಿಂಗ್‌ ಅಪರೇಷನ್‌ ಪ್ರಕರಣ ಕುರಿತು ನಗರ ಕೇಂದ್ರ ಅಪರಾಧ ವಿಭಾಗ ಪೊಲೀಸರು ಮಾಧ್ಯಮವೊಂದರ ಮುಖ್ಯಸ್ಥರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ ನಂತರ ನೋಟಿಸ್‌ ಕೊಟ್ಟು ಬಿಡುಗಡೆ ಮಾಡಲಾಗಿದೆ.

Sponsored

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಾಲ್ಕೈದು ದಿನಗಳಿಂದ ತಂಗಿದ್ದ ಮಾಧ್ಯಮವೊಂದರ ಮುಖ್ಯಸ್ಥನನ್ನು ಸಿಸಿಬಿ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದು, ಗುರುವಾರ ಮುಂಜಾನೆ ನಗರಕ್ಕೆ ತಂದು, ವಿಚಾರಣೆ ನಡೆಸಿ, ನೋಟಿಸ್‌ ಕೊಟ್ಟು ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಸೂಚಿಸಿ ಬಿಡುಗಡೆ ಮಾಡಿದ್ದಾರೆ.

ಪ್ರಕರಣ ಕುರಿತು ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವರೂ ಆಗಿರುವ ಎಚ್‌ ಡಿ ಕುಮಾರಸ್ವಾಮಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇವರನ್ನು ಬಂಧನ ಮಾಡುವಂತೆ ಒತ್ತಾಯ ಮಾಡಿ ನಗರ ಪೊಲೀಸ್‌ ಆಯುಕ್ತರು ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿ, ಕಚೇರಿಗಳ ಮುಂದೆ ಪ್ರತಿಭಟನೆ ಮಾಡಿದ್ದರು. ಅಲ್ಲದೆ ಬಂಧನಕ್ಕೆ ಒಂದು ವಾರದ ಗಡುವು ನೀಡಿದ್ದರು.

ಜೊತೆಗೆ ಬಾಗೇಪಲ್ಲಿ ರೌಡಿಶೀಟರ್‌ ಮತ್ತು ಕಾಂಗ್ರೆಸ್‌ ಮುಖಂಡೆಯೊಬ್ಬರ ಪಾತ್ರವೂ ಇದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರು.