ಸೋಮವಾರ, 26 ಅಕ್ಟೋಬರ್ 2026
Trending

ಲಾಯರ್ ಬ್ಯಾಗ್ ಕಿತ್ತುಕೊಂಡು ಮರವೇರಿ 2 ಲಕ್ಷ ರೂ ನೋಟುಗಳನ್ನು ಕಿತ್ತು ಕಿತ್ತು ಎಸೆದ ಕೋತಿ!!

ಕೋತಿಗಳು ಮಾಡುವ ಕಪಿ ಚೇಷ್ಟೆಯನ್ನು ಆಗಾಗ ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿರುತ್ತೇವೆ. ಇದೀಗ ಅಂತದ್ದೇ ಒಂದು ಘಟನೆ ನಡೆದಿದ್ದು, ಕೋತಿಯೊಂದು ವಕೀಲರ ಬ್ಯಾಗ್ ಕಿತ್ತುಕೊಂಡು 2 ಲಕ್ಷ ರುಪಾಯಿ ನೋಟುಗಳ ಸುರಿಮಳೆಗೈದಿದೆ.

Sponsored

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.  ಪೊಲೀಸರ ಪ್ರಕಾರ, ರಾಜಾ ಎಂದೂ ಕರೆಯಲ್ಪಡುವ ವಕೀಲ ರವೀಂದ್ರ ಶನಿವಾರ (ಮೇ 30) ತಮ್ಮ ಸಹಚರರಾದ ಅಮೀರ್ ಖಾನ್ ಮತ್ತು ಸೋಹನ್ ಪಾಲ್ ಅವರೊಂದಿಗೆ ಆಸ್ತಿ ನೋಂದಣಿಗಾಗಿ ಸ್ಟಾಂಪ್ ಪೇಪರ್‌ಗಳನ್ನು ಖರೀದಿಸಲು ನ್ಯಾಯಾಲಯದ ಕಡೆ ಹೋಗುತ್ತಿದ್ದರು. ಹೀಗಾಗಿ ವ್ಯವಹಾರಕ್ಕಾಗಿ ಒಂದು ಬ್ಯಾಗ್‌ನಲ್ಲಿ 2 ಲಕ್ಷ ರುಪಾಯಿ ಕೊಂಡೊಯ್ದಿದ್ದರು.

ಅವರು ದಾರಿಯಲ್ಲಿ ಹೋಗುವಾಗ ಒಂದು ಕೋತಿ ಇದ್ದಕ್ಕಿದ್ದಂತೆ ಅವರ ಕೈಯಲ್ಲಿ ಇದ್ದ ಚೀಲವನ್ನು ಹಿಡಿದು ಓಡಿಹೋಗಿದೆ. ಹಠಾತ್ತನೆ ವಕೀಲರ ಕೈ ಚೀಲ ಕಡೆ ದಾಳಿ ಮಾಡಿದ ಕೋತಿಯೊಂದು ಹಣದ ಬ್ಯಾಗ್‌ ಅನ್ನು ಕಿತ್ತುಕೊಂಡು ನ್ಯಾಯಾಲಯದ ಆವರಣದಲ್ಲೇ ಇದ್ದ ಬೇವಿನ ಮರದ ತುತ್ತತುದಿಗೆ ಜಿಗಿದಿದೆ. ಆ ಬಳಿಕ ಅಲ್ಲಿಂದ ನೋಟುಗಳ ಮಳೆ ಸುರಿಸಿದೆ. 

ಮರದಿಂದ ನೋಟುಗಳು ಕೆಳಗೆ ಬೀಳುತ್ತಿದ್ದಂತೆ, ಅಲ್ಲೇ ಇದ್ದ ಇತರ ವಕೀಲರು, ಕಕ್ಷಿದಾರರು ಮುಗಿಬಿದ್ದು ಹಣವನ್ನು ಆರಿಸಿಕೊಳ್ಳಲು ಮುಂದಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯ ವೈರಲ್ ಆಗಿದ್ದು ಮರದಿಂದ ನೋಟುಗಳು ಕೆಳಗೆ ಹಾರುತ್ತಿರುವಾಗ ಜನರು ಹಣವನ್ನು ಪಡೆಯಲು ಪರದಾಡುತ್ತಿರುವುದು ಕಂಡು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಧಾವಿಸಿ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ವಕೀಲ ರವೀಂದ್ರ ಕೆಳಗೆ ಬಿದ್ದಿದ್ದ ಹಣದಲ್ಲಿ ಒಟ್ಟು 1.91 ಲಕ್ಷ ರುಪಾಯಿ ಮರಳಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಡಿಯೋ 👇

https://x.com/i/status/2060996736454451437