ಭಾನುವಾರ, 25 ಅಕ್ಟೋಬರ್ 2026
Trending

ಮಂಗಳೂರು: ಉಚಿತ ಟಿವಿ ಚಾನೆಲ್‌ ವೀಕ್ಷಣೆಗೆ ಮೊಬೈಲ್‌ ಆಪ್‌ ಡೌನ್‌ಲೋಡ್‌ ಮಾಡಿ ಲಕ್ಷ ಲಕ್ಷ ಹಣ ಕಳೆದುಕೊಂಡ ವ್ಯಕ್ತಿ

Fraud News

ಮಂಗಳೂರು: ಮೊಬೈಲ್‌ ಆಪ್‌ ಡೌನ್‌ಲೋಡ್‌ ಮಾಡಿದರೆ ಎಲ್ಲಾ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು ಎಂಬ ಜಾಹೀರಾತನ್ನು ನಂಬಿದ ವ್ಯಕ್ತಿಯೊಬ್ಬರು ರೂ.1,78,191 ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಕುರಿತು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Sponsored

ಅ.15 ರಂದು ಫೇಸ್‌ಬುಕ್‌ ವೀಕ್ಷಿಸುತ್ತಿದ್ದಾಗ ʼಎಕ್ಸ್‌ಎಂ ಟಿವಿʼ ಎಂಬ ಆಪ್‌ನ ಜಾಹೀರಾತು ಕಾಣಿಸಿಕೊಂಡಿತ್ತು. ಆಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಎಲ್ಲ ಟಿವಿ ಚಾನೆಲ್‌ ಉಚಿತವಾಗಿ ವೀಕ್ಷಿಸಬಹುದು ಎನ್ನುವ ಜಾಹೀರಾತನ್ನು ನಂಬಿ ಆಪ್‌ ಡೌನ್‌ಲೋಡ್‌ ಮಾಡಿದ್ದರು.
ಅ.16 ರಂದು ಅವರ ಎರಡು ಬ್ಯಾಂಕ್‌ ಖಾತೆಗಳಿಂದ ಕ್ರಮವಾಗಿ ರೂ.98000 ಮತ್ತು ರೂ.30,191 ವರ್ಗಾವಣೆಯಾಗಿತ್ತು. ನಂತರ ಅ.17 ರಂದು ಮತ್ತೊಂದು ಬಾರಿ ರೂ.50000 ಹಣ ಅವರ ಗಮನಕ್ಕೆ ಬಾರದೆ ಅಪರಿಚಿತ ಖಾತೆಗೆ ವರ್ಗಾವಣೆಯಾಗಿತ್ತು.

ಅ.18 ರಂದು ಹಣ ಪರಿಶೀಲನೆ ಮಾಡಿದಾಗ ಹಣ ಇಲ್ಲದಿರುವುದು ದೂರುದಾರರ ಗಮನಕ್ಕೆ ಬಂದಿದೆ. ನಂತರ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ತೆರಳಿ ಪರಿಶೀಲಿಸಿದಾಗ ಮೊಬೈಲ್‌ನಲ್ಲಿ ಎಪಿಕೆ ಫೈಲ್‌ ಡೌನ್‌ಲೋಡ್‌ ಆಗಿರುವುದು ತಿಳಿದುಬಂದಿದೆ.

ಇದೀಗ ದೂರು ದಾಖಲಾಗಿದ್ದು, ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದಾರೆ.