ಭಾನುವಾರ, 25 ಅಕ್ಟೋಬರ್ 2026
Trending

ದಕ್ಷಿಣ ರೈಲ್ವೆಯಲ್ಲೇ ಮಂಗಳೂರು- ತಿರುವನಂತಪುರಂ ವಂದೇ ಭಾರತ್ ನಂ 1 !! 3 ತಿಂಗಳಲ್ಲಿ ಬರೋಬ್ಬರಿ ₹73.35 ಲಕ್ಷ ಆದಾಯ

ಭಾರತದಲ್ಲಿ ವಂದೇ ಭಾರತ್ ರೈಲಿಗೆ ಬಾರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪ್ರಯಾಣಿಕರಿಂದ ಅದ್ಭುತ ಪೂರ್ವ ಪ್ರೋತ್ಸಾಹವು ಕೂಡ ದೊರೆಯುತ್ತದೆ. ಇದರ ನಡುವೆ ದಕ್ಷಿಣ ರೈಲ್ವೆ ವಲಯದಲ್ಲಿ ತಿರುವನಂತಪುರಂ-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಳಿಕೆಯಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿದ್ದು, 73.35 ಲಕ್ಷ ಆದಾಯವನ್ನು ಇಲಾಖೆಗೆ ತಂದುಕೊಟ್ಟಿದೆ.

Sponsored

ದಕ್ಷಿಣ ರೈಲ್ವೆ ಬಿಡುಗಡೆ ಮಾಡಿರುವ ಅಧಿಕೃತ ದತ್ತಾಂಶಗಳ ಪ್ರಕಾರ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳನ್ನು ಸಂಪರ್ಕಿಸುವ ಒಟ್ಟು 24 ವಂದೇ ಭಾರತ್ ರೈಲು ಸೇವೆಗಳ ಪೈಕಿ 20632 ತಿರುವನಂತಪುರಂ-ಮಂಗಳೂರು ವಂದೇ ಭಾರತ್ (VB) ಎಕ್ಸ್‌ಪ್ರೆಸ್ ಅತಿ ಹೆಚ್ಚು ಗಳಿಕೆ ಮಾಡಿದೆ. ಈ ರೈಲು 2025ರ ಆಗಸ್ಟ್‌ನಿಂದ ಅಕ್ಟೋಬರ್ ಅವಧಿಯಲ್ಲಿ ಬರೋಬ್ಬರಿ ₹73.35 ಲಕ್ಷ ಆದಾಯವನ್ನು ರೈಲ್ವೆ ಇಲಾಖೆಗೆ ತಂದುಕೊಟ್ಟಿದೆ.

ಮಂಗಳೂರು-ತಿರುವನಂತಪುರಂ, ಚೆನ್ನೈ ಎಗ್ಮೋರ್-ನಾಗರ್‌ಕೋಯಿಲ್ ಮತ್ತು ಕಾಸರಗೋಡು-ತಿರುವನಂತಪುರಂ ಮಾರ್ಗಗಳು ನಿರಂತರವಾಗಿ ಶೇ. 100 ಕ್ಕಿಂತ ಹೆಚ್ಚಿನ ಪ್ರಯಾಣಿಕರ ದಟ್ಟಣೆಯನ್ನು (Occupancy) ದಾಖಲಿಸುತ್ತಿವೆ. ಹೀಗಾಗಿ ಪ್ರಯಾಣಿಕರ ಬುಕಿಂಗ್ ಸಂಖ್ಯೆಯಲ್ಲೂ ಈ ರೈಲು ಅಗ್ರಸ್ಥಾನದಲ್ಲಿದೆ. ಪರಿಶೀಲನಾ ಅವಧಿಯಲ್ಲಿ ಈ ಮಾರ್ಗದಲ್ಲಿ ಅತಿ ಹೆಚ್ಚು ಅಂದರೆ 11,896 ಬುಕಿಂಗ್‌ಗಳು ದಾಖಲಾಗಿವೆ. ಇದಕ್ಕೆ ಹೋಲಿಸಿದರೆ 20627 ಚೆನ್ನೈ ಎಗ್ಮೋರ್-ನಾಗರ್‌ಕೋಯಿಲ್ ವಂದೇ ಭಾರತ್‌ನಲ್ಲಿ 2,832 ಮತ್ತು 20642 ಕೊಯಮತ್ತೂರು ಜಂಕ್ಷನ್-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್‌ನಲ್ಲಿ ಕೇವಲ 835 ಬುಕಿಂಗ್‌ಗಳಾಗಿವೆ ಎಂದು ವರದಿ ಬಹಿರಂಗಪಡಿಸಿದೆ.