ಸೋಮವಾರ, 26 ಅಕ್ಟೋಬರ್ 2026
Trending

ಬೆಳಾಲು: ನಡುರಸ್ತೆಯಲ್ಲಿ ಹೊತ್ತಿ ಉರಿದ ಸ್ಕೂಟಿ: ಚಿಕಿತ್ಸೆ ಫಲಿಸದೆ ಬಾಲಕ ಸಾವು

ಬೆಳ್ತಂಗಡಿ: ಬೆಳಾಲು ಮಿನಂದೇಲು ಬಳಿ ಸ್ಕೂಟಿಯೊಂದು ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಜೂ.12 ರಂದು ನಡೆದಿತ್ತು.

Sponsored

ಸ್ಕೂಟರ್ ಚಲಾಯಿಸುತ್ತಿದ್ದ ಇತ್ತಿಚಿಗೆ ನಿವೃತ್ತಿ ಹೊಂದಿದ ಮಾಜಿ ಸೈನಿಕ ಮೋಹನ್ ಗೌಡ ಕಾಡಂಡ ಅವರು ಪುತ್ರ ದಿಯಾನ್ ಅವರನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸ್ಕೂಟಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಬೆಂಕಿ ಹತ್ತಿಕೊಂಡಿತ್ತು.

ದಿಯಾನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ (ಇಂದು) ಜೂ.24 ರಂದು ನಿಧನ ಹೊಂದಿದ್ದಾರೆ.