ಸೋಮವಾರ, 26 ಅಕ್ಟೋಬರ್ 2026
Trending

ಬೆಳಾಲು: ಬೈಪಾಡಿ ಅಪಘಾತದ ಗಾಯಾಳುಗಳು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲು!

ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಬೈಪಾಡಿ ದೊಂಪಾದಫಾಲ್ಕೆ ಸಮೀಪದ ತಿರುವಿನಲ್ಲಿ ಜೂ. 24 ಸಂಭವಿಸಿದ 2 ಬೈಕ್‌ಗಳ ಮುಖಾಮುಖಿ ಡಿಕ್ಕಿ ಪ್ರಕರಣದ ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Sponsored

ರಸ್ತೆ ಬದಿಯ ಪೊದೆಗೆ ಬಿದ್ದು ನಜ್ಜುಗುಜ್ಜಾದ ಸ್ಥಿತಿಯಲ್ಲಿದ್ದ ಒಂದು ಸ್ಕೂಟರ್ ಹಾಗೂ ಒಂದು ಬೈಕ್ ನಡುವಿನ ಈ ಭೀಕರ ಡಿಕ್ಕಿ ಮಳೆಗಾಲದ ಜಾರು ರಸ್ತೆ ಹಾಗೂ ವೇಗದಿಂದಾಗಿ ಸಂಭವಿಸಿರಬಹುದು ಎಂದು ಸ್ಥಳೀಯರು ತಿಳಿಸಿದ್ದರು.

ಸ್ಥಳೀಯರು ಮತ್ತು ಸಾರ್ವಜನಿಕರ ನೆರವಿನಿಂದ ಗಾಯಾಳುಗಳನ್ನು ಕೂಡಲೇ ರಕ್ಷಿಸಿ, ತುರ್ತು ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ.