Conjunctivitis: ರಾಜ್ಯದಲ್ಲಿ ಮದ್ರಾಸ್ ಐ ರೋಗ ಹೆಚ್ಚಾಗಿದೆ. ಪಿಂಕ್ ಐ ಅಥವಾ ಕಾಂಜಂಕ್ಟಿವಿಟಿಸ್ (Conjunctivitis) ಅಥವಾ ಮದ್ರಾಸ್ ಐ ರೋಗ ಎಂದು ಕರೆಯಲ್ಪಡುವ ಈ ಕಾಯಿಲೆ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದೆ. ಇದರಿಂದಾಗಿ ಪೋಷಕರಲ್ಲಿ ಆತಂಕ ಹೆಚ್ಚಿದ್ದು, ಸದ್ಯ ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟವಾಗಿದೆ.
Sponsoredಈ ರೋಗ ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾದ ಹಿನ್ನೆಲೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Health Department) ಮಾರ್ಗಸೂಚಿ ಹೊರಡಿಸಿದೆ. ಜೊತೆಗೆ ರೋಗದ ಲಕ್ಷಣಗಳು, ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ. ಮಾಹಿತಿ ಈ ಕೆಳಗಿನಂತಿದೆ.
ಮದ್ರಾಸ್ ಐ ರೋಗದ ಲಕ್ಷಣಗಳು :-
ಕಣ್ಣು ಕೆಂಪಾಗುವುದು, ನೀರು ಸೋರುವಿಕೆ, ಅತಿಯಾದ ಕಣ್ಣೀರು,
ಕಣ್ಣಿನಲ್ಲಿ ತುರಿಕೆ, ಸತತ ಕಣ್ಣು ನೋವು ಮತ್ತು ಚುಚ್ಚುವಿಕೆ, ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು, ದೃಷ್ಟಿ ಮಂಜಾಗುವುದು ಹಾಗೂ ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತದಿಂದ ಕೂಡಿರುವ ಲಕ್ಷಣಗಳು ಕಂಡುಬರುತ್ತದೆ.
ಮದ್ರಾಸ್ ಐ ಬರದಂತೆ ತಡೆಗಟ್ಟುವಿಕೆ:-
• ವೈಯಕ್ತಿಕವಾಗಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ.
• ಆಗಾಗ ಸೋಪು ಹಾಗೂ ನೀರಿನಿಂದ ಕೈಗಳನ್ನು ತೊಳೆಯರಿ.
• ಈ ಸೊಂಕು ಇರುವ ವ್ಯಕ್ತಿಯೊಂದಿಗೆ ಕಣ್ಣಿನ ನೇರ ಸಂಪರ್ಕದಿಂದ ದೂರವಿರಿ.
• ಸೊಂಕಿತ ವ್ಯಕ್ತಿ ಬಳಸಿದ ಕರವಸ್ರ್ತ ಮತ್ತು ಇತರ ವಸ್ತುಗಳನ್ನು ಬಳಸಬೇಡಿ.
• ಶೀತ, ಜ್ವರ, ಕೆಮ್ಮು ಇದ್ದರೆ ಕೂಡಲೇ ಪರೀಕ್ಷಿಸಿ ಚಿಕಿತ್ಸೆ ಪಡೆಯಬೇಕು
• ಮದ್ರಾಸ್ ಐ ಸೋಂಕಿತ ಟವಲ್, ಬಟ್ಟೆಗಳು, ದಿಂಬುಗಳು, ಹೊದಿಕೆ, ಹಾಸುವ ಬಟ್ಟೆಗಳನ್ನು ಪ್ರತ್ಯೇಕವಾಗಿ ಇರಿಸಿ.
ಪಿಂಕ್ ಐ ಹರಡುವುದನ್ನು ತಡೆಯಲು ಕ್ರಮಗಳು :-
• ಈ ಸೊಂಕು ಕಂಡು ಬಂದ ತಕ್ಷಣವೇ ನೇತ್ರ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.
• ಸೋಂಕಿತರು ಕೈಗಳಿಂದ ಪದೇ ಪದೇ ಕಣ್ಣುಗಳನ್ನು ಮುಟ್ಟಬೇಡಿ.
• ಕಣ್ಣುಗಳಿಗೆ ವಿಶ್ರಾಂತಿ ನೀಡುವುದು.
• ಮೊಬೈಲ್ ಹಾಗೂ ಕಂಪ್ಯೂಟರ್ ಪರದೆಯಿಂದ ದೂರವಿರಬೇಕು.
• ಸೂರ್ಯನ ಬೆಳಕಿಗೆ ನೇರವಾಗಿ ಕಣ್ಣುಗಳನ್ನು ಒಡ್ಡಬಾರದು
• ಕಣ್ಣು, ಕೈ, ಮುಖಗಳನ್ನು ಆಗಾಗ ಮುಟ್ಟುತ್ತಿರಬೇಡಿ.





