Hepatitis infection: ಹೆಪಟೈಟಿಸ್ ನಿಂದ ಸಾಯುವ ಹಂತಕ್ಕೆ ಹೋಗುತ್ತಾರಾ ಜನ?!! ಈ ರೋಗದ ಬಗ್ಗೆ ಎಚ್ಚರದಿಂದಿರಲು WHO ಹೇಳಿದ್ಯಾಕೆ?

Latest news health news Are people dying of Hepatitis infection

Hepatitis infection: ಐದಾರು ತಿಂಗಳು ಬಿಸಿಲಿನ ಬೇಗೆಯಿಂದ ಕೆಂಗಟ್ಟ ಧರೆ, ಜೀವಗಳಿಗೆ ಮಳೆರಾಯ ತಂಪೆರೆಯುವುದು ನಿಜ. ಆದರೆ ಮಳೆ ತನ್ನೊಂದಿಗೆ ಹಲವು ರೋಗಗಳನ್ನು ಜೊತೆಯಾಗಿಯೇ ತೆಗೆದುಕೊಂಡು ಬರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಳೆಗಾಲದಲ್ಲಿ ಜ್ವರ, ಶೀತ, ನೆಗಡಿ,‌ ಕೆಮ್ಮು ಮಾತ್ರವಲ್ಲದೆ, ಭಯಾನಕ ಸಾಂಕ್ರಾಮಿಕ ರೋಗಗಳು ಆರೋಗ್ಯದ ಪರಿಸ್ಥಿತಿಯನ್ನು ಹದಗೆಡಿಸುತ್ತದೆ. ಮಾನವರ ದೇಹವು ಬಾಹ್ಯವಾಗಿ ಅಥವಾ ಆಂತರಿಕವಾಗಿ ಹಲವಾರು ಸೋಂಕುಗಳಿಗೆ ಒಳಗಾಗಬಹುದು. ಅಂಥವುಗಳಲ್ಲಿ ಡೆಡ್ಲಿ ಸೋಂಕದ ಹೆಪಟೈಟಿಸ್(Hepatitis infection) ಕೂಡ ಒಂದು. ಹೆಪಟೈಟಿಸ್‌ ರೋಗ ಭಯಾನಕ ಲಿವರ್‌ ಸೋಂಕಿನ ಕಾಯಿಲೆಯಾಗಿದ್ದು, ಇದನ್ನು ಗುಣ ಪಡಿಸದಿದ್ದರೆ ಸಾವು ಖಚಿತ.

ಇದು ಸಾಮಾನ್ಯವಾಗಿ ವೈರಲ್ ಸೋಂಕಿನಿಂದ ಉಂಟಾಗುತ್ತದೆ. ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವ ಮಾರಕ ಕಾಯಿಲೆ. ಹೆಪಟೈಟಿಸ್‌ ಎಂದರೆ ಲಿವರ್‌ನಲ್ಲಿ ಉರಿಯೂತ ಉಂಟಾಗುವುದು. ಇದು ಸಾಮಾನ್ಯವಾಗಿ ವೈರಲ್ ಸೋಂಕಿನಿಂದ ಉಂಟಾಗುತ್ತದೆ. ಡ್ರಗ್ಸ್, ಮದ್ಯಪಾನ, ಟಾಕ್ಸಿನ್‌ ಈ ಅಂಶಗಳು ದೇಹವನ್ನು ಸೇರಿದಾಗ ಕೂಡ ಹೆಪಟೈಟಿಸ್‌ ತೊಂದರೆ ಕಂಡು ಬರುತ್ತದೆ.

ಹೆಪಟೈಟಿಸ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜುಲೈ 28ರಂದು ವಿಶ್ವ ಹೆಪಟೈಟಿಸ್‌ ಡೇ(world Hepatitis day) ಆಚರಿಸಲಾಗುತ್ತದೆ. ಪ್ರತಿ ವರ್ಷ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಲಿಪಡೆದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ವೈರಲ್ ಹೆಪಟೈಟಿಸ್‌ನ ತನಿಖೆ ಮತ್ತು ಚಿಕಿತ್ಸೆಯನ್ನು ಹೆಚ್ಚಿಸಲು ಒತ್ತು ನೀಡಿದೆ. ಇದೇ ರೀತಿ ಮುಂದುವರಿದರೆ, 2040ರ ವೇಳೆಗೆ ಮಲೇರಿಯಾ, ಟಿಬಿ ಮತ್ತು ಎಚ್‌ಐವಿಗಿಂತ ಹೆಚ್ಚಿನ ಸಾವುಗಳಿಗೆ ಹೆಪಟೈಟಿಸ್ ಮಾತ್ರ ಕಾರಣವಾಗಲಿದೆ ಎಂದು ಸಂಸ್ಥೆ ಎಚ್ಚರಿಸಿದೆ.

ಈ ಅಪಾಯಕಾರಿ ಹೆಪಟೈಟಿಸ್ ನಲ್ಲಿ ಪ್ರಮುಖವಾಗಿ ಐದು ಬಗೆಯ ವೈರಸ್ ಗಳನ್ನು ನೋಡಬಹುದು. ಹೆಪಟೈಟಿಸ್ ಎ, ಬಿ, ಸಿ, ಡಿ, ಇ ಎನ್ನುವ 5 ಪ್ರಭೇದಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಹೆಪಟೈಟಿಸ್‌ ಎ ಬೇಗನೆ ಗುಣ ಪಡಿಸಬಹುದಾದ ಕಾಯಿಲೆಯಾಗಿದೆ, ಹೆಪಟೈಟಿಸ್‌ ಬಿ, ಸಿ ಮತ್ತು ಡಿ ಗುಣವಾಗಲು ಅಧಿಕ ಸಮಯ ತೆಗೆದುಕೊಳ್ಳುವುದು. ಹೆಪಟೈಟಿಸ್‌ ಇ ಗರ್ಭಿಣಿ ಮಹಿಳೆಯರಿಗೆ ಬಂದರೆ ತುಂಬಾ ಅಪಾಯ. ಈ ಐದು ಬಗೆಯ ಸೋಂಕುಗಳು ಯಾವ ರೀತಿ ಬರುತ್ತದೆ, ಯಾವ ಸೋಂಕು ಯಾವ ರೀತಿ ಅಪಾಯವನ್ನು ತಂದೊಡ್ಡುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಹೆಪಟೈಟಿಸ್ ಎ (Hepatitis A): ಈ ಸೋಂಕು ಕಲುಷಿತ ನೀರು ಅಥವಾ ಆಹಾರದಿಂದ (Contaminate Water, Food) ಹರಡುತ್ತದೆ. ಇದು ಬಹುಬೇಗನೆ ಗುಣವಾಗುತ್ತದೆ. ಸ್ವಚ್ಛತೆ ಇಲ್ಲದ ಸ್ಥಳಗಳಲ್ಲಿ ಸಂಚರಿಸಿದಾಗ, ಸ್ವಚ್ಛವಾಗಿರದ ಆಹಾರ ನೀರನ್ನು ಸೇವಿಸುವುದರಿಂದ ಕಂಡುಬರುತ್ತದೆ. 4 ರಿಂದ 6 ವಾರಗಳಲ್ಲಿ ಈ ಸೋಂಕು ಗುಣಮುಖವಾಗುತ್ತದೆ. ಆದರೆ ಕೆಲವು ಜನರಲ್ಲಿ ಲಿವರ್ ಫೇಲ್ಯೂರ್(liver failure) ಸಹ ಉಂಟಾಗುತ್ತದೆ.

ಹೆಪಟೈಟಿಸ್ ಬಿ (Hepatitis B): ಇದು ಸೋಂಕಿರುವ ವ್ಯಕ್ತಿಯ ಎಂಜಲು, ರಕ್ತ, ಜನನಾಂಗ, ವೀರ್ಯಾಣು ಮತ್ತೊಬ್ಬರ ದೇಹವನ್ನು ಸೇರಿದಾಗ ಉಂಟಾಗುವುದು. ಅಲ್ಲದೆ ಇದು ತಾಯಿಯಿಂದ ಮಗುವಿಗೆ ಹರಡುತ್ತದೆ. ಇದನ್ನು (HBV) ವೈರಸ್ ಎಂದು ಕರೆಯಲಾಗುವುದು. ಲಿವರ್ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್ ಗೂ ಇದು ಕಾರಣವಾಗಬಲ್ಲದು. ಈ ಸೋಂಕು ಜಾಗತಿಕವಾಗಿ ಬಹುದೊಡ್ಡ ಪ್ರಮಾಣದಲ್ಲಿದೆ. ಹೆಪಟೈಟಿಸ್ ಸೋಂಕುಗಳ ಪೈಕಿ ಗಂಭೀರವಾದುದು ಇದೇ ಸೋಂಕು.

ಹೆಪಟೈಟಿಸ್ ಸಿ(Hepatitis C): ಹೆಪಟೈಟಿಸ್‌ ಸಿ ನೇರ ಸಂಪರ್ಕದಿಂದಾಗಿ ಹರಡುವ ಸೋಂಕು. ಅಂದರೆ ಎಂಜಲು, ಬೆವರು, ಸೂಜಿ, ಅಸುರಕ್ಷತೆ ಲೈಂಗಿಕ ಕ್ರಿಯೆ ಇವುಗಳ ಮೂಲಕ ಹರಡುತ್ತದೆ. ತಾಯಿಯಿಂದ ಮಗುವಿಗೆ ಹರಡುತ್ತದೆ. ಈ ಸೋಂಕಿನಿಂದ ಗುಣಮುಖವಾಗಲು ಅಧಿಕ ಸಮಯ ಬೇಕಾಗುತ್ತದೆ.

ಹೆಪಟೈಟಿಸ್ ಡಿ (Hepatitis D): ಈಗಾಗಲೇ ಹೆಪಟೈಟಿಸ್ ಬಿ ಸೋಂಕಿಗೆ ತುತ್ತಾದವರಲ್ಲಿ ಮಾತ್ರ ಈ ಸೋಂಕು ಉಂಟಾಗುತ್ತದೆ. ಇದು ಸಹ ಹೆಪಟೈಟಿಸ್ ಬಿ ಮಾದರಿಯಲ್ಲೇ ಹರಡುತ್ತದೆ. ಇದೊಂದು ಗಂಭೀರವಾದ ಲಿವರ್‌ ಸಮಸ್ಯೆಯಾಗಿದೆ. ಸೋಂಕು ಇರುವ ವ್ಯಕ್ತಿಯ ರಕ್ತದ ಮೂಲಕ ಹರಡುತ್ತದೆ.

ಹೆಪಟೈಟಿಸ್ ಇ (Hepatitis E): ಹೆಪಟೈಟಿಸ್‌ ಇ ವೈರಸ್‌ ಮಲ, ಕಲುಷಿತ ನೀರು ಅಥವಾ ಆಹಾರದಿಂದ ಹರಡುತ್ತದೆ. ಇದು ವ್ಯಕ್ತಿಯ ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಸ್ವಚ್ಛವಿಲ್ಲದ ಸ್ಥಳಗಳಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತದೆ. ಹೆಪಟೈಟಿಸ್ ಇ ಗರ್ಭಿಣಿಯರು, ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಸೇರಿದಂತೆ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹಾನಿಕಾರಕವಾಗಿದೆ.,

ಈ ಎಲ್ಲಾ ರೀತಿಯ ಹೆಪಟೈಟಿಸ್ ಸೋಂಕನ್ನು ತಡೆಗಟ್ಟಲು ಲಸಿಕೆ ಪಡೆದುಕೊಳ್ಳುವುದು ಉತ್ತಮ. ಶುಚಿತ್ವದ ಕಡೆಗೆ ಗಮನ ನೀಡಬೇಕು. ಬೇರೆ ಪ್ರದೇಶಗಳಿಗೆ ಹೋದಾಗ ಕಾಯಿಸಿದ ನೀರನ್ನು ಕುಡಿಯಿರಿ. ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಆದ್ಯತೆ ನೀಡುವುದು ಅಗತ್ಯ. ಹೆಪಟೈಟಿಸ್ ಇರುವ ವ್ಯಕ್ತಿಯ ರಕ್ತವನ್ನು ಬರಿಕೈಯಿಂದ ಮುಟ್ಟಬಾರದು

 

ಇದನ್ನು ಓದಿ: DA Hike: ಕೇಂದ್ರ ಸರಕಾರದಿಂದ ನೌಕರರಿಗೆ ಭರ್ಜರಿ ಸಿಹಿ ಸುದ್ದಿ! ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಸಂಬಳದಲ್ಲೂ ಏರಿಕೆ! 

Leave A Reply

Your email address will not be published.