ಈ ಬಾರಿ ಮುಂಗಾರು ಮಳೆ ಆಗುವುದಿಲ್ಲ. ಅನ್ನಕ್ಕೆ ಕೊರತೆ ಆಗುತ್ತೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಈ ಹಿಂದೆಯೇ ಭವಿಷ್ಯ ನುಡಿದಿದ್ದರು. ಈ ಮೂಲಕ ಅಂದು ಹೇಳಿದ್ದ ಭವಿಷ್ಯ ನಿಜವಾಗಿದೆ. ಇದೀಗ ಹಿಂಗಾರು ಮಳೆ ಬಗ್ಗೆ ಭವಿಷ್ಯ ನುಡಿದಿದ್ದು, ಸದ್ಯಕ್ಕೆ ಹಿಂಗಾರು ಮಳೆ ಆಗುತ್ತೆ. ಜನರಿಗೆ ಸುಭಿಕ್ಷೆ ಆಗುತ್ತದೆ. ನೆಮ್ಮದಿ ಸಿಗುತ್ತೆ. ಜಲಚರಗಳಿಗೆ ಒಳ್ಳೆಯದಾಗುತ್ತೆ ಎಂದಿದ್ದರು.
Sponsoredರಾಜಕಾರಣದ ಕುರಿತು ಶ್ರೀಗಳು, ನನಗಿಂತ ನಿಮಗೇ (ಮಾಧ್ಯಮ) ಚೆನ್ನಾಗಿ ಗೊತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ. ದೈವ ಕೃಪೆ ಎಲ್ಲರಿಗೂ ಆಗಲಿ. ನಮಗೆ ಬೇಕಾಗಿದ್ದು ಮಳೆ ಬೆಳೆ. ರೋಗ ರುಜಿನಗಳು ದೂರಾಗಿ ಮನುಷ್ಯನಿಗೆ ನೆಮ್ಮದಿ ಬರಬೇಕು, ಶಾಂತಿ ಬರಬೇಕು ಎಂದು ನುಡಿದರು.




