ಶನಿವಾರ, 24 ಅಕ್ಟೋಬರ್ 2026

Shivamogga : ಖಮೇನಿ ನಮ್ಮ ತಂದೆಗಿಂತಲೂ ಹೆಚ್ಚು, ಇನ್ಮುಂದೆ ಒಂದೊಂದು ಮನೇಲಿ 100 ಮಕ್ಕಳ ಹುಟ್ಟಿಸ್ತೇವೆ – ಶಿವಮೊಗ್ಗದಲ್ಲಿ ಮುಸ್ಲಿಂ ಮಹಿಳೆ ಆಕ್ರೋಶ

Shivamogga : ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ನ ಸರ್ವೋಚ್ಛ ನಾಯಕ ಖಮೇನಿ ಹತ್ಯೆಯನ್ನು ಇರಾನಿನ ಪ್ರಜೆಗಳು ಸಂಭ್ರಮಿಸುತಿದ್ದರೆ ನಮ್ಮ ಭಾರತೀಯರು ಮಾತ್ರ ಅತ್ಯಂತ ದುಃಖವೆತ್ತಪಡಿಸಿ ಹೋರಾಟ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಇದೀಗ ಶಿವಮೊಗ್ಗದಲ್ಲಿ ಶಿಯಾ ಮುಸ್ಲಿಂ ಸಮುದಾಯ ಬೃಹತ್ ಪ್ರತಿಭಟನೆ ನಡೆದಿದ್ದು, ಈ ವೇಳೆ ಮಹಿಳೆ ಒಬ್ಬಳು ‘ಒಂದೊಂದು ಮನೇಲಿ 100 ಮಕ್ಕಳನ್ನು ಹುಟ್ಟಿಸುತ್ತೇವೆ, ಆದರೆ ಶರಣಾಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಅಮೇರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ಮಾಡಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ ಮಾಡಿರುವುದನ್ನು ಖಂಡಿಸಿ ಶಿವಮೊಗ್ಗ ನಗರದಲ್ಲಿ ಶಿಯಾ ಮುಸ್ಲಿಂ ಸಮುದಾಯದವರಿಂದ ಬೃಹತ್ ಪ್ರತಿಭಟನೆ ನಡೆಯಿತು ಈ ವೇಳೆ “ಖಮೇನಿ ಅವರ ಹತ್ಯೆಯನ್ನು ನಾವು ಸಹಿಸುವುದಿಲ್ಲ. ಅವರು ಎಷ್ಟು ಜನರನ್ನು ಸಾಯಿಸುತ್ತಾರೋ ಸಾಯಿಸಲಿ, ನಾವು ಶರಣಾಗುವ ಮಾತೇ ಇಲ್ಲ. ರಕ್ತದಲ್ಲಿ ಶಹೀದ್ (ಬಲಿದಾನ) ಆಗುವ ಗುಣವಿದೆ. ಒಂದೊಂದು ಮನೆಯಿಂದ ನಾವು 100 ಮಕ್ಕಳನ್ನು ಹುಟ್ಟಿಸುತ್ತೇವೆ. ನಾವು ಹುಸೇನಿಯಾಗಿ ಬದುಕುತ್ತೇವೆ ಮತ್ತು ಹುಸೇನಿಯಾಗಿಯೇ ಸಾಯುತ್ತೇವೆ” ಎಂದು ಪ್ರತಿಭಟನಾ ನಿರತ ಮಹಿಳೆಯೊಬ್ಬರು ಖಮೇನಿ ಹತ್ಯೆ ಖಂಡಿಸಿ ಆಕ್ರೋಶಭರಿತ ಹೇಳಿಕೆ ನೀಡಿದರು.

ಅಂಜುಮನ್-ಎ-ಫೈಜಾನ್-ಎ-ಹುಸೇನಿ ಸಂಘಟನೆಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಶಿಯಾ ಧರ್ಮಗುರುಗಳು ಸೇರಿದಂತೆ ನೂರಾರು ಮುಸ್ಲಿಂ ಪುರುಷರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು. ಇರಾನ್ ಮೇಲೆ ಅಮೆರಿಕ (US) ಮತ್ತು ಇಸ್ರೇಲ್ ನಡೆಸುತ್ತಿರುವ ಸರಣಿ ದಾಳಿಗಳನ್ನು ಪ್ರತಿಭಟನಾಕಾರರು ಒಕ್ಕೊರಲಿನಿಂದ ಖಂಡಿಸಿದರು.