ಸೋಮವಾರ, 26 ಅಕ್ಟೋಬರ್ 2026
Trending

ಶಾಲೆಗಳಲ್ಲಿ ಸೊಳ್ಳೆ ಕಾಟ, ಹೆಣ್ಮಕ್ಕಳು ಸ್ಕರ್ಟ್‌ ಬದಲು ಸಲ್ವಾರ್‌ ಹಾಕಲು ಸೂಚನೆ ನೀಡಿದ ಆರೋಗ್ಯ ಸಚಿವ

Dengue Fever

ಕೋಲ್ಕತ್ತಾ: ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪಶ್ಚಿಮ ಬಂಗಾಳ ಆರೋಗ್ಯ ಸಚಿವ ಡಾ.ಶಾರದ್ವತ್‌ ಮುಖರ್ಜಿ ಅವರು ಶಾಲಾ ವಿದ್ಯಾರ್ಥಿಗಳ ಸಮವಸ್ತ್ರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡುವಂತೆ ಶಾಲೆಗಳಿಗೆ ಸಲಹೆ ನೀಡಿದ್ದಾರೆ.

Sponsored

ಡೆಂಗ್ಯೂ ಹರಡುವಿಕೆ ಹೆಚ್ಚಾಗುವ ತಿಂಗಳಲ್ಲಿ ವಿದ್ಯಾರ್ಥಿಗಳು ದೇಹದ ಕೈ ಕಾಲುಗಳನ್ನು ಸಾಧ್ಯವಾದಷ್ಟು ಮುಚ್ಚುವಂತಹ ಉಡುಪು ಧರಿಸುವಂತೆ ಶಾಲೆಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದು, ಸಚಿವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಹೆಣ್ಣುಮಕ್ಕಳು ಸ್ಕರ್ಟ್‌ ಧರಿಸಿ ಶಾಲೆಗೆ ಬರುವುದನ್ನು ತಾತ್ಕಾಲಿಕವಾಗಿ ತಪ್ಪಿಸಿ, ಕಾಲುಗಳನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವ ಸಲ್ವಾರ್‌ ಸೂಟ್‌ ಹಾಕೊಂಡು ಬರುವಂತೆ ಸೂಚನೆ ಕೊಡಿ. ಮುಂದಿನ ಮೂರು ತಿಂಗಳು ಶಾಲೆಯ ಸಮವಸ್ತ್ರ ಏನೇ ಇರಲಿ, ವಿದ್ಯಾರ್ಥಿಗಳಿಗೆ ಪೂರ್ಣ ತೋಳಿನ ಬಟ್ಟೆ ಧರಿಸಲು ಅವಕಾಶ ಕೊಡಿ. ಶಿಕ್ಷಕರು, ಮುಖ್ಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯಿನಿಯರು ಇದಕ್ಕೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.