ಸೋಮವಾರ, 26 ಅಕ್ಟೋಬರ್ 2026
Trending

ಜನರು ನೀರಿಗೆ, ಅನ್ನಕ್ಕೆ ಕಷ್ಟ ಪಡಬೇಕಾಗುತ್ತೆ-ಕೋಡಿಶ್ರೀ ಹೊಸ ಭವಿಷ್ಯ

Kodi Mutt Swamiji

ಕೋಡಿ ಮಠದ ಸ್ವಾಮೀಜಿ ಅವರು ಇದೀಗ ಮತ್ತೊಂದು ಸ್ಫೋಟ ಭವಿಷ್ಯವನ್ನು ನುಡಿದಿದ್ದಾರೆ. ಯಲಹಂಕ ಸಮೀಪದ ಬಂಡಿಕೋಡಿಗೆಹಳ್ಳಿಯಲ್ಲಿರುವ ಶನೇಶ್ವರ ದೇವಸ್ಥಾನದ ನಾಲ್ಕನೇ ವರ್ಷ ಲಕ್ಷದೀಪೋತ್ಸವದಲ್ಲಿ ಭಾಗಿಯಾಗಿದ್ದ ಕೋಡಿ ಮಠದ ಸ್ವಾಮೀಜಿಗಳು “ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಡಲಿದೆ. ಜನರು ನೀರಿಗೆ, ಅನ್ನಕ್ಕೆ ಕಷ್ಟ ಪಡಬೇಕಾಗುತ್ತೆ ಹಿಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗಲಿದೆ” ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದರು.

Sponsored

ಶನೇಶ್ವರ ಅಂದ್ರೆ ಕೆಟ್ಟದ್ದು ಮಾಡುವ ದೇವರು ಎನ್ನುವ ಭಾವನೆ ಇದೆ. ಮನುಷ್ಯನ ಅತ್ಯಂತ ಆತ್ಮೀಯ ಸ್ನೇಹಿತ ಅಂದ್ರೆ ಅದು ಶನೇಶ್ವರ, ನವಗ್ರಹಗಳಲ್ಲಿ ಶನೇಶ್ವರನಿಗೆ ಸ್ಥಾನವಿದೆ. ಶನೇಶ್ವರ ಪ್ರೀತಿ ಗಳಿಸಿದರೆ ಒಳಿತನ್ನು ಮಾಡುತ್ತಾನೆ ಎಂದು ಕೋಡಿಶ್ರೀಗಳು ಹೇಳಿದರು.