ಶನಿವಾರ, 24 ಅಕ್ಟೋಬರ್ 2026

IPL ಪಂದ್ಯದ ಬಳಿಕ ಗುಜರಾತ್ ಟೈಟನ್ಸ್ ತಂಡ ಬಸ್ ಗೆ ಬೆಂಕಿ – 1 ಗಂಟೆ ಒಳಗೆ ಸಿಲುಕಿದ ಆಟಗಾರರು!!

ಐಪಿಎಲ್ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ ಗುಜರಾತ್ ಟೈಟನ್ಸ್ ತಂಡ ಅದಾದ ಸ್ವಲ್ಪ ಸಮಯದಲ್ಲೇ ಮತ್ತೊಂದು ಆಘಾತದಿಂದ ಪಾರಾಗಿದೆ. ಹೌದು, ಪಂದ್ಯ ಮುಗಿಸಿ ತೆರಳುತ್ತಿದ್ದ ತಂಡದ ಬಸ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. 

ಆಟಗಾರರು ಕ್ರೀಡಾಂಗಣದಿಂದ ಹೋಟೆಲ್ ಗೆ ಪ್ರಯಾಣಿಸುತ್ತಿದ್ದ ವೇಳೆ ಬಸ್ ಗೆ ಬೆಂಕಿ ತಗುಲಿದೆ. ಭಾರಿ ಬೆಂಕಿಯ ಜ್ವಾಲೆ, ದಟ್ಟವಾದ ಹೊಗೆ ವ್ಯಾಪಿಸಿದೆ. ಇಡೀ ಬಸ್ ನಲ್ಲಿ ಬೆಂಕಿ ಹೊಗೆ ಕಾಣಿಸಿಕೊಂಡಿದ್ದು, ಕೂಡಲೇ ಭದ್ರತಾ ಸಿಬ್ಬಂದಿ ಎಲ್ಲಾ ಆಟಗಾರರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಒಂದು ಗಂಟೆ ಕಾಲ ಆಟಗಾರರು ಬಸ್‌ನಲ್ಲೇ ಸಿಲುಕಿ ಒದ್ದಾಡಿದ್ದಾರೆ. ಬಳಿಕ, ಆಟಗಾರರನ್ನು ಸ್ಥಳಾಂತರಿಸಲಾಗಿದ್ದು, ಯಾವುದೇ ದೊಡ್ಡ ಅಪಾಯ ಸಂಭವಿಸಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.