ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಜೈಲು ಶಿಕ್ಷೆ ಅನುಭವಿಸಿದವರಿಗೆ ಮಂತ್ರಿ ಗಿರಿಯಿಂದ ಗೇಟ್ ಪಾಸ್ ನೀಡುವಂತಹ ಮಹತ್ವದ ಬಿಲ್ ಒಂದನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ.
ಹೌದು, ಬಂಧನಕ್ಕೊಳಗಾಗಿ 30 ದಿನಗಳ ಕಾಲ ಕಸ್ಟಡಿಯಲ್ಲೇ ಇರುವ ಸಚಿವರು, ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯನ್ನು ಸ್ವಯಂಚಾಲಿತವಾಗಿ ಹುದ್ದೆಯಿಂದ ವಜಾಗೊಳಿಸುವ ಮಹತ್ವದ ಮಸೂದೆ ಜುಲೈ 20 ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧದ ಆರೋಪ ಹೊತ್ತಿರುವ ಯಾವುದೇ ಸಚಿವರು 30 ದಿನಗಳ ಕಾಲ ಕಸ್ಟಡಿಯಲ್ಲಿದ್ದರೆ, 31ನೇ ದಿನದಂದು ಅವರು ಸ್ವಯಂಚಾಲಿತವಾಗಿ ಅಥವಾ ರಾಷ್ಟ್ರಪತಿ/ರಾಜ್ಯಪಾಲರ ಮೂಲಕ ಹುದ್ದೆಯಿಂದ ವಜಾಗೊಳ್ಳಲಿದ್ದಾರೆ. ಈ ವಿಷಯವನ್ನು ಪರಿಶೀಲಿಸಲು ರಚಿಸಲಾದ ಜಂಟಿ ಸಂಸದೀಯ ಸಮಿತಿಯು (JPC) ಜುಲೈ 17 ರಂದು ನಡೆಯಲಿರುವ ಸಭೆಯಲ್ಲಿ ಬಿಲ್‌ನ ತಿದ್ದುಪಡಿ ಆವೃತ್ತಿಗೆ ಅನುಮೋದನೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಆದ್ರೆ ಸುಳ್ಳು ಮೊಕದ್ದಮೆ ಹೂಡಿ, ಅವರನ್ನು ಜೈಲಿಗೆ ಅಟ್ಟಿ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ಆಡಳಿತಾರೂಢ ಬಿಜೆಪಿ ಈ ಯೋಜನೆ ರೂಪಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಈಗಾಗಲೇ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನೂರು ದಿನಗಳಿಗೂ ಹೆಚ್ಚು ಕಾಲ ಜೈಲು ವಾಸ ಅನುಭವಿಸಿರುವುದು ಈ ಸಮಯದಲ್ಲಿ ಹೈಲೈಟ್ ಆಗುತ್ತಿದೆ.




