ಶನಿವಾರ, 24 ಅಕ್ಟೋಬರ್ 2026

ಉಗಿಯಲು ಬಸ್ ಕಿಟಕಿಯಿಂದ ತಲೆ ಹೊರ ಹಾಕಿದ ಯುವಕನಿಗೆ ಗುದ್ದಿದ ಟಿಪ್ಪರ್- ತಲೆ ಕಟ್, ಬಸ್ಸಿನಲ್ಲಿ ನೇತಾಡಿದ ದೇಹ!!

ಕುಂದಗೋಳದ ಹೊರವಲಯದಲ್ಲಿ, ಕೆಎಸ್‌ಆರ್‌ಟಿಸಿ ಬಸ್ಸಿನ ಕಿಟಕಿಯಿಂದ ಗುಟ್ಕಾ ಉಗುಳಲು ತಲೆ ಹೊರಹಾಕಿದ 17 ವರ್ಷದ ಐಟಿಐ ವಿದ್ಯಾರ್ಥಿಗೆ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ವಿದ್ಯಾರ್ಥಿಯ ಶಿರಚ್ಛೇದವಾಗಿ, ರುಂಡ -ಮುಂಡಗಳೆರಡು ಎರಡು ಬೇರ್ಪಟ್ಟು ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಧಾರವಾಡ ಜಿಲ್ಲೆ ಕುಂದಗೋಳ ಹೊರವಲಯದಲ್ಲಿ ನಡೆದಿದೆ. ಶಿರೂರು ಗ್ರಾಮದ ಐಟಿಐ ವಿದ್ಯಾರ್ಥಿ ಫಕೀರೇಶ(17) ಮೃತಪಟ್ಟ ಹುಡುಗ. 

ಹುಬ್ಬಳ್ಳಿಯಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ಬಸ್ ತೆರಳುತ್ತಿತ್ತು. ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ. ಬಸ್ ಹಿಂಬದಿ ಸೀಟ್ ನಲ್ಲಿ ಫಕೀರೇಶ ಕುಳಿತಿದ್ದ. ಬಸ್ ಚಲಿಸುವಾಗ ಉಗಿಯಲು ಬಸ್ ಕಿಟಕಿಯಿಂದ ತಲೆ ಹೊರಗೆ ಹಾಕಿದ್ದ. ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಗೆ ಫಕೀರೇಶನ ತಲೆಗೆ ತಾಗಿದ್ದರಿಂದ ಕಟ್ ಆಗಿದೆ ಎನ್ನಲಾಗಿದೆ.

ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ ವಿದ್ಯಾರ್ಥಿಯ ಶಿರವು ದೇಹದಿಂದ ಬೇರ್ಪಟ್ಟಿದ್ದು, ರಸ್ತೆಗೆ ಬಿದ್ದಿದೆ. ದೇಹವು ಬಸ್ಸಿನ ಕಿಟಕಿಯ ಬಳಿಯೇ ನೇತಾಡುತ್ತಿದ್ದ ದೃಶ್ಯ ಸ್ಥಳೀಯರಲ್ಲಿ ಮತ್ತು ಸಹ ಪ್ರಯಾಣಿಕರಲ್ಲಿ ನಡುಕ ಹುಟ್ಟಿಸುವಂತಿತ್ತು. ಘಟನೆಯ ತೀವ್ರತೆಗೆ ಬಸ್ ನಿಲ್ದಾಣದ ಬಳಿ ನೆರೆದಿದ್ದ ಜನರು ದಿಕ್ಕೆಟ್ಟು ಹೋಗಿದ್ದಾರೆ. ಸದ್ಯ ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.