ಭಾನುವಾರ, 25 ಅಕ್ಟೋಬರ್ 2026
Trending

₹300 ಶುಲ್ಕ, ಸೌಲಭ್ಯ ಮಾತ್ರ ಶೂನ್ಯ; ಎತ್ತಿನಭುಜ ಟ್ರೆಕ್ಕಿಂಗ್‌ ಅವ್ಯವಸ್ಥೆ ಬಯಲು

ಚಿಕ್ಕಮಗಳೂರು: ಬಹುದಿನಗಳ ಬಳಿಕ ಎತ್ತಿನಭುಜ ಚಾರಣಕ್ಕೆ ಮತ್ತೆ ಅವಕಾಶ ನೀಡಲಾಗಿದ್ದು, ಆರಂಭದಲ್ಲೇ ಅರಣ್ಯ ಇಲಾಖೆಯ ಅವ್ಯವಸ್ಥೆ ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.

Sponsored

ನಕಲಿ ಔಷಧ ಜಾಲಕ್ಕೆ ವಿದೇಶಿ ಕನೆಕ್ಷನ್: ಪಶ್ಚಿಮ ಏಷ್ಯಾದಲ್ಲಿ ಪ್ರಶಾಂತ್, ಇಬ್ಬರು ಸಹಚರರ ಬಂಧನ

ಟ್ರೆಕ್ಕಿಂಗ್‌ ಮಾರ್ಗದಲ್ಲಿ ಗಾಳಿ-ಮಳೆಯಿಂದ ಬಿದ್ದ ಮರಗಳು ಇನ್ನೂ ತೆರವುಗೊಂಡಿಲ್ಲ. ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸಿ ಬಂದ ಪ್ರವಾಸಿಗರಿಗೆ ಕಾಡಿನೊಳಗಿನ ಮಾರ್ಗದ ಬಗ್ಗೆ ಸೂಕ್ತ ಮಾಹಿತಿ ಸಿಗದೆ ಪರದಾಡುವಂತಾಗಿದೆ. ಗೈಡ್‌ಗಳ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎನ್ನಲಾಗಿದ್ದು, ದಾರಿ ತಿಳಿಯದೆ ಕೆಲ ಪ್ರವಾಸಿಗರು ವಾಪಸ್‌ ತೆರಳಿದ್ದಾರೆ.
5 ಕಿ.ಮೀ. ಚಾರಣಕ್ಕೆ ₹300 ಶುಲ್ಕ ನಿಗದಿಪಡಿಸಲಾಗಿದೆ. ಗೈಡ್‌ ಸೇವೆಗೆ ಪ್ರತಿ ವ್ಯಕ್ತಿಗೆ ಹೆಚ್ಚುವರಿಯಾಗಿ ₹75 ಶುಲ್ಕ ವಿಧಿಸಲಾಗುತ್ತಿದೆ. ಆದರೆ, ಟ್ರೆಕ್ಕಿಂಗ್‌ ಪುನರಾರಂಭಕ್ಕೂ ಮುನ್ನ ಅಗತ್ಯ ಸಿದ್ಧತೆ ಹಾಗೂ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.

ನಕಲಿ ಔಷಧ ಜಾಲಕ್ಕೆ ವಿದೇಶಿ ಕನೆಕ್ಷನ್: ಪಶ್ಚಿಮ ಏಷ್ಯಾದಲ್ಲಿ ಪ್ರಶಾಂತ್, ಇಬ್ಬರು ಸಹಚರರ ಬಂಧನ

ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಮತ್ತು ಎಸ್‌ಒಪಿ ಪಾಲನೆ ಮಾಡದೆ ಚಾರಣಕ್ಕೆ ಅವಕಾಶ ನೀಡಿರುವುದು ಸರಿಯಲ್ಲ. ಪ್ರವಾಸಿಗರ ಸುರಕ್ಷತೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದ ಬಳಿಕವೇ ಟ್ರೆಕ್ಕಿಂಗ್‌ ಮುಂದುವರಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.