ಬೆಂಗಳೂರು :ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಆರೋಪ ಪ್ರಕರಣ ಇದೀಗ ಮತ್ತೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ.
Sponsored₹300 ಶುಲ್ಕ, ಸೌಲಭ್ಯ ಮಾತ್ರ ಶೂನ್ಯ; ಎತ್ತಿನಭುಜ ಟ್ರೆಕ್ಕಿಂಗ್ ಅವ್ಯವಸ್ಥೆ ಬಯಲು
ಈ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾಹಿತಿ ನೀಡಿದ್ದು, ನಿಗಮದ ಹಣದ ಅಕ್ರಮ ಬಳಕೆಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಾಳೆ ಬೆಳಿಗ್ಗೆ 9.30ಕ್ಕೆ ಫ್ರೀಡಂ ಪಾರ್ಕ್ನಿಂದ ಪ್ರತಿಭಟನಾ ರ್ಯಾಲಿ ಆರಂಭವಾಗಲಿದೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ರ್ಯಾಲಿ ಮೂಲಕ ವಿಧಾನಸೌಧದತ್ತ ತೆರಳಿ ಮುತ್ತಿಗೆ ಹಾಕಲಿದ್ದಾರೆ ಎಂದು ಅಶೋಕ್ ತಿಳಿಸಿದ್ದಾರೆ.
₹300 ಶುಲ್ಕ, ಸೌಲಭ್ಯ ಮಾತ್ರ ಶೂನ್ಯ; ಎತ್ತಿನಭುಜ ಟ್ರೆಕ್ಕಿಂಗ್ ಅವ್ಯವಸ್ಥೆ ಬಯಲು
ಹಗರಣದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಕಾಂಗ್ರೆಸ್ ನಾಯಕರು ಪ್ರತಿಯಾಗಿ ಧರಣಿ ನಡೆಸುತ್ತಿರುವುದನ್ನೂ ಅಶೋಕ್ ಟೀಕಿಸಿದ್ದಾರೆ. ಜನರ ಪರವಾಗಿ ಪ್ರಶ್ನೆ ಎತ್ತಿದಾಗ ಸರ್ಕಾರ ಉತ್ತರ ನೀಡಬೇಕು, ಪ್ರತಿಯಾಗಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಹೋರಾಟದ ಮುಂದಿನ ರೂಪುರೇಷೆಗಳ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದ್ದು, ಹೋರಾಟಕ್ಕೆ ಅವರ ಬೆಂಬಲವೂ ದೊರೆತಿದೆ ಎಂದು ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದ ಹೊರಗಿನ ಪ್ರತಿಭಟನೆಯ ಜೊತೆಗೆ ವಿಧಾನಸಭೆಯ ಒಳಗೂ ಈ ವಿಚಾರವನ್ನು ಮುಂದುವರಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಅವರು ಹೇಳಿದ್ದಾರೆ.
₹300 ಶುಲ್ಕ, ಸೌಲಭ್ಯ ಮಾತ್ರ ಶೂನ್ಯ; ಎತ್ತಿನಭುಜ ಟ್ರೆಕ್ಕಿಂಗ್ ಅವ್ಯವಸ್ಥೆ ಬಯಲು




