ಮಂಗಳವಾರ, 27 ಅಕ್ಟೋಬರ್ 2026
Trending

ಈ ದೇಶದಲ್ಲಿ ಹೆಣಗಳೊಂದಿಗೆ ನೃತ್ಯ ಮಾಡಿ ಸಂಭ್ರಮಿಸುತ್ತಾರೆ ಜನಗಳು! ಈ ಆಚರಣೆಯ ಕಾರಣ ಗೊತ್ತಾದ್ರೆ ಇವರೇನು ಮನುಷ್ಯಾರಾ ಅನ್ನೋದು ಗ್ಯಾರಂಟಿ ನೀವುಗಳು!!

‘ಸಾವು’ ಎಂಬುದು ಎಂತ ನೋವನ್ನು ತರುತ್ತದೆ ಎಂದು ಎಲ್ಲರಿಗೂ ಗೊತ್ತು. ಎಂತಾ ಶತ್ರುವಿನಿಂದಲೂ ಈ ದುಃಖವನ್ನು ತಡೆಯಲು ಆಗದು. ಸಾಮಾನ್ಯವಾಗಿ ಯಾರಾದರೂ ಸತ್ತರೆ ಏನು ಮಾಡುತ್ತಾರೆ ಹೇಳಿ. ಇದು ನಿಮಗೆ ವಿಚಿತ್ರವಾದ ಪ್ರಶ್ನೆ ಅನಿಸಿದರೂ ಕೂಡ ಹೀಗೆ ಕೇಳಲು ಕಾರಣವೊಂದು ಇದ್ದೇ ಇದೆ. ಯಾಕಂದ್ರೆ ಯಾರಾದರೂ ತೀರಿದಾಗ ತುಂಬಾ ದುಃಖದೊಂದಿಗೆ ಅವರವರ ಸಂಪ್ರದಾಯದ ಪ್ರಕಾರ ಶವ ಸಂಸ್ಕಾರವನ್ನು ಮಾಡುತ್ತೇವೆ. ಕೆಲವರು ಸುಡುತ್ತಾರೆ, ಇನ್ನು ಕೆಲವರು ಮಣ್ಣುಮಾಡುತ್ತಾರೆ. ಇದು ಎಲ್ಲೆಡೆಯೂ ನಡೆಯುವಂತಹ ಪದ್ಧತಿ. ಆದರೆ ಇಲ್ಲೊಂದು ದೇಶದಲ್ಲಿ ಯಾರಾದರೂ ಮರಣ ಹೊಂದಿದಾಗ ವಿಚಿತ್ರವಾದ ಸಂಪ್ರದಾಯವನ್ನು ಆಚರಿಸುತ್ತಾರೆ. ಇದನ್ನು ಕೇಳಿದರೆ ನಿಮಗೆ, ಇವರೆಂತಾ ಜನರಪ್ಪಾ, ಮನುಷ್ಯರಾ ಇವರು ಎಂದು ಅನಿಸಿಬಿಡುತ್ತದೆ.

Sponsored

ಹೌದು, ಮಡಗಾಸ್ಕರ್ ದೇಶದಲ್ಲಿ ಯಾರಾದರೂ ಸತ್ತಾಗ ಆಚರಿಸುವ ಈ ವಿಧಾನವನ್ನು ನೀವು ನೋಡಿ ಬಿಟ್ರೆ ಎಂತವರಿಗೂ ಹಾಗನಿಸೋದು ಸಹಜ ಬಿಡಿ. ಯಾಕೆಂದ್ರೆ ಈ ದೇಶದಲ್ಲಿ ಯಾರಾದರೂ ಮರಣ ಹೊಂದಿದರೆ ಜನರು ಆ ಹೆಣವನ್ನು ಹಿಡಿದುಕೊಂಡು ನೃತ್ಯ ಮಾಡಲು ಮತ್ತು ಹಾಡಲು ಪ್ರಾರಂಭಿಸುತ್ತಾರೆ! ಮೃತ ದೇಹದೊಂದಿಗೆ ನರ್ತಿಸಲು ಶುರುಮಾಡುತ್ತಾರೆ. ಇದು ಆಶ್ಚರ್ಯವೆನಿಸಿದರೂ ಸತ್ಯ ಸಂಗತಿ! ಇದನ್ನೆಲ್ಲ ನೋಡಿದರೆ ಈ ದೇಶದ ಜನರು, ಅಲ್ಲಿನ ಸಂಪ್ರದಾಯ ಎಲ್ಲವೂ ಒಂದು ರೀತಿ ವಿಚಿತ್ರ ಇದೆಯಲ್ಲಾ ಅಂತ ಅನಿಸುತ್ತೆ ಅಲ್ವಾ?

Advertisement
Advertisement

ಅದು ಕೂಡ ವಿಚಿತ್ರ ಅಂದರೆ ಇವರು ನೃತ್ಯ ಮಾಡೋದು ಹೆಣದ ಕೊನೆಯ ಮೆರವಣಿಗೆಗಲ್ಲ. ಆಗಷ್ಟೇ ಅಥವಾ ಅದೇ ದಿನ ಸತ್ತ ಹೆಣದೊಂದಿಗೂ ಅಲ್ಲ. ಹಾಗೇನಾದರೂ ಅಂದುಕೊಂಡ್ರೆ, ಅದು ನಿಮ್ಮ ಊಹೆ ಅಷ್ಟೆ. ಮತ್ತೆ ಯಾವಾಗ ಎಂದು ಆಶ್ಚರ್ಯದಿಂದ ನೀವು ಕೇಳಬಹುದು. ಸತ್ತ ದೇಹವನ್ನು ಮಣ್ಣಿನಲ್ಲಿ ಹೂಣಿ ಸುಮಾರು ಎರಡು ಅಥವಾ ಏಳು ವರ್ಷಗಳ ಬಳಿಕ ಜನರು ಆ ಹೆಣವನ್ನು ಸಮಾಧಿಯಿಂದ ಹೊರತೆಗೆಯುತ್ತಾರೆ. ಬಳಿಕ ಅದನ್ನು ಹಿಡಿದುಕೊಂಡು ಡ್ಯಾನ್ಸ್ ಮಾಡುತ್ತಾರೆ. ಕೊಳೆತು ನಾರುವ ಆ ಮೃತ ದೇಹದೊಂದಿಗೆ ನೃತ್ಯ ಮಾಡುತ್ತ ಮತ್ತು ಹಾಡುತ್ತ ಸಂಭ್ರಮಿಸುವ ಅಲ್ಲಿನ ಜನರು ಆ ಶವವನ್ನು ಮತ್ತೆ ಹೂಳುತ್ತಾರೆ.

ಮಡಗಾಸ್ಕರ್ನಲ್ಲಿ ಆಚರಿಸುವ ಈ ವಿಚಿತ್ರ ಮತ್ತು ವಿಶಿಷ್ಟ ಪದ್ಧತಿಯನ್ನು ಅಲ್ಲಿನ ಜನರು ಫಮಡಿಹಾನಾ (Famadihana) ಎಂದು ಕರೆಯುತ್ತಾರಂತೆ. ಅಂದರೆ ‘ಅಸ್ಥಿಪಂಜರ ರಚನೆ’ (turning of the skeleton) ಎಂದರ್ಥ. ಜನರ ಪ್ರಕಾರ, ಸತ್ತ ದೇಹದ ಮೇಲೆ ಮಾಂಸ ಇರುವವರೆಗೆ, ಆತ್ಮವು ಮತ್ತೊಂದು ದೇಹಕ್ಕೆ ಹೋಗಲು ಸಾಧ್ಯವಿಲ್ಲವಂತೆ. ಆದ್ದರಿಂದ ಜನರು ತಮ್ಮ ಪ್ರೀತಿಪಾತ್ರರನ್ನು ಸಮಾಧಿಯಿಂದ ಹೊರಗೆ ತೆಗೆದು, ಅದರೊಂದಿಗೆ ನೃತ್ಯ ಮಾಡುವುದರಿಂದ ಅದು ಆದಷ್ಟು ಬೇಗ ಮಾಂಸ ಕಳೆದುಕೊಂಡು ಬರಿ ಎಲುಬು ಉಳಿಯುತ್ತದೆಯಂತೆ. ಸತ್ತ ಮನುಷ್ಯನ ದೇಹವು ಎಷ್ಟು ಬೇಗ ಅಸ್ಥಿಪಂಜರವಾಗುತ್ತದೆಯೋ ಅಷ್ಟು ಬೇಗ ಅದು ಮುಕ್ತಿಯನ್ನು ಪಡೆಯುತ್ತದೆಯಂತೆ. ಅಲ್ಲದೆ ಇದರಿಂದ ಅವರು ಹೊಸ ಜೀವನವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಇಲ್ಲಿನ ಜನ ನಂಬುತ್ತಾರೆ.

ಆದರೂ ಕೂಡ ಸತ್ತು, ಮಣ್ಣಿನಲ್ಲಿ ಹೂಣಿದ ಹೆಣವನ್ನು ಹೊರಗೆ ತೆಗೆದು ನೃತ್ಯ ಮಾಡುವುದನ್ನು, ಆ ಜನರನ್ನು ಕಲ್ಪೆಸಿಕೊಳ್ಳೋದು ಕೂಡ ಸಾಧ್ಯವಿಲ್ಲ ಬಿಡಿ. ಅದೂ ಅಲ್ಲದೆ ಸತ್ತವನ ಸಂಬಂಧಗಳಿಗೆ ಮತ್ತೆ ಅವರ ಮುಖವನ್ನು ನೋಡುವುದೆಂದರೆ, ಅದು ಕೂಡ ಅರೆಬರೆ ಕೊಳೆತ ಆ ದೇಹವನ್ನು ನೋಡುವುದೆಂದರೆ ಹೇಗಾಗಬೇಡ ಹೇಳಿ. ಒಟ್ಟಿನಲ್ಲಿ ಪ್ರಪಂಚದಾದ್ಯಂತ ಎಂತೆಂತ ಜನರು, ಯಾವೆಲ್ಲಾ ಸಂಪ್ರದಾಯಗಳು ಇವೆ ಎಂದು ತಿಳಿದು ಕಸಿವಿಸಿಯಾಗೋದಂತೂ ಗ್ಯಾರೆಂಟಿ ಬಿಡಿ.

Advertisement