ಮಂಗಳವಾರ, 27 ಅಕ್ಟೋಬರ್ 2026
Trending

ಕರಾವಳಿ ಭೂತಗಳು ರಿಷಬ್ ಶೆಟ್ಟಿ ಸ್ವತ್ತಾಗಿವೆ – ಪುರುಷೋತ್ತಮ ಬಿಳಿಮಲೆ ಆಕ್ರೋಶ

ತುಳುನಾಡಿನ ಭೂತಗಳು ಕಾಂತಾರ ಚಲನಚಿತ್ರದ ಮೂಲಕ ರಿಷಬ್ ಶೆಟ್ಟಿಯ ಸ್ವತ್ತಾಗಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಕಿಡಿಕಾರಿದ್ದಾರೆ.

Sponsored

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸಿದ್ದ ಆರು ಪುಸ್ತಕಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ‘ನಮ್ಮ ತಂದೆ ತಾಯಿ ಭೂತಗಳ ಆರಾಧನೆ ಮಾಡಿಕೊಂಡು, ಮಾಂಸಾಹಾರ ಸೇವಿಸಿಕೊಂಡು ನೆಮ್ಮದಿಯಿಂದ ಇದ್ದರು. ಈಗ ಆ ಭೂತಗಳು ಕಾಂತಾರ ಚಲನಚಿತ್ರದ ಮೂಲಕ ರಿಷಬ್ ಶೆಟ್ಟಿಯ ಸ್ವತ್ತಾಗಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

Advertisement
Advertisement

ಅಲ್ಲದೆ ಪುರುಷೋತ್ತಮ ಬಿಳಿಮಲೆ ಅವರ ಪ್ರಕಾರ, ತುಳುನಾಡಿನ ದೈವಾರಾಧನೆ ಶತಮಾನಗಳಿಂದ ಸ್ಥಳೀಯ ಜನರ ನಂಬಿಕೆ, ಸಂಸ್ಕೃತಿ ಮತ್ತು ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ. ಆದರೆ ‘ಕಾಂತಾರ’ ಚಿತ್ರದ ಭಾರೀ ಯಶಸ್ಸಿನ ನಂತರ ಈ ಸಂಪ್ರದಾಯವನ್ನು ಕೇವಲ ಸಿನಿಮಾದೊಂದಿಗೆ ಗುರುತಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಅದು ಮೂಲ ಸಂಸ್ಕೃತಿಯ ಅಸ್ತಿತ್ವಕ್ಕೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ

ಪುರುಷೋತ್ತಮ ಬಿಳಿಮಲೆ ಅವರ “ಕಾಂತಾರ ಮೂಲಕ ಭೂತಗಳು ರಿಷಬ್ ಶೆಟ್ಟಿಯವರ ಸ್ವತ್ತಾಗಿವೆ” ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರ ಅಭಿಪ್ರಾಯವನ್ನು ಬೆಂಬಲಿಸಿ ದೈವಾರಾಧನೆಯ ಮೂಲ ಸಾಂಸ್ಕೃತಿಕ ಹಿನ್ನೆಲೆಯನ್ನು ಉಳಿಸಬೇಕೆಂದು ವಾದಿಸುತ್ತಿದ್ದರೆ, ಮತ್ತೊಂದೆಡೆ ‘ಕಾಂತಾರ’ ಸಿನಿಮಾ ತುಳುನಾಡಿನ ದೈವಾರಾಧನೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದೆ ಎಂದು ಕೆಲವರು ವಾದಿಸುತ್ತಿದ್ದಾರೆ.

Advertisement