ಮಂಗಳವಾರ, 27 ಅಕ್ಟೋಬರ್ 2026
Trending

ಸಿನಿಮಾ ಚಿತ್ರೀಕರಣದ ವೇಳೆ ನಟ ಸಿಡಿಸಿದ ಗುಂಡಿಗೆ ಛಾಯಾಗ್ರಾಹಕಿ ಬಲಿ | ಮನರಂಜನೆ ಓರ್ವ ಪ್ರತಿಭಾನ್ವಿತ ಹುಡುಗಿಯನ್ನು ಬಲಿ ಪಡೆದಿದೆ

ಸಿನಿಮಾ ಚಿತ್ರೀಕರಣದ ವೇಳೆ ಅಮೆರಿಕದ ನಟ ಆಲೆಕ್ ಬಾಲ್ಡ್‌ವಿನ್ ಬಳಸುತ್ತಿದ್ದ ಬಂದೂಕಿನಿಂದ ಹಾರಿದ ಗುಂಡು ಛಾಯಾಗ್ರಾಹಕಿಯನ್ನು ಬಲಿ ಪಡೆದಿದೆ. ನ್ಯೂ ಮೆಕ್ಸಿಕೊದಲ್ಲಿ ಚಿತ್ರೀಕರಣದ ಸೆಟ್‌ನಲ್ಲಿ ಈ ದುರ್ಘಟನೆ ನಡೆದಿರುವುದಾಗಿ ಅಮೆರಿಕದ ಅಧಿಕಾರಿಗಳು ಗತಿಳಿಸಿದ್ದಾರೆ.

Sponsored

‘ರಸ್ಟ್’ ಹೆಸರಿನ ಸಿನಿಮಾ ಚಿತ್ರೀಕರಣದಲ್ಲಿ ಪಾರ್ಪಟಿ ಗನ್‌ನಿಂದ ನಟ ಬಾಲ್ಡ್ವಿನ್ ಸಿಡಿಸಿದ ಗುಂಡು ಒಬ್ಬರ ಸಾವಿಗೆ ಕಾರಣವಾಗಿದೆ.

Advertisement
Advertisement
ಬಾಲ್ಡ್ವಿನ್

ಘಟನೆಯಲ್ಲಿ ಛಾಯಾಗ್ರಾಹಕಿ ಹಲಿನಾ ಹಚಿನ್ಸ್ (42) ಸಾವಿಗೀಡಾದರೆ, ನಿರ್ದೇಶಕ ಜೋಲ್ ಸೌಜಾ (48) ಗಾಯಗೊಂಡಿದ್ದಾರೆ.

19ನೇ ಶತಮಾನದ ಕಥೆಯಾಧಾರಿತ ಸಿನಿಮಾದಲ್ಲಿ ಬಾಲ್ಡ್‌ವಿನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಘಟನೆ ಸಂಬಂಧ ತನಿಖೆ ಮುಂದುವರಿದಿದ್ದು, ಯಾವುದೇ ದೂರು ದಾಖಲಾಗಿಲ್ಲ.

Advertisement