ಸೋಮವಾರ, 26 ಅಕ್ಟೋಬರ್ 2026
Trending

ಬೋಳಿಯಾರ್‌: ಬೈಕ್‌ಗೆ ಹಿಂಬದಿಯಿಂದ ಪಿಕಪ್‌ ಡಿಕ್ಕಿ, ಇಬ್ಬರು ಸಾವು

Advertisement

ಕೊಣಾಜೆ: ಬೋಳಿಯಾರ್‌ ಸಮೀಪದ ಕುರ್ನಾಡು ಪೆಟ್ರೋಲ್‌ ಪಂಪ್‌ ಬಳಿ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಪಿಕಪ್‌ ವಾಹನ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಬೈಕ್‌ ಸವಾರ ಸ್ಥಳದಲ್ಲಿಯೇ ಮೃತ ಪಟ್ಟರೆ, ಗಂಭೀರವಾಗಿ ಗಾಐಗೊಂಡಿದ್ದ ಸಹಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Sponsored

ಕಿನ್ಯ ಅರೆಬಿನಗರದ ಮಹಮ್ಮದ್‌ ಅರ್ಫಾಝ್‌ (22) ಹಾಗೂ ಕಿನ್ಯ ಉಕ್ಕುಡ ನಿವಾಸಿ ಜುನೈದ್‌ (23) ಮೃತ ಯುವಕರು.

Advertisement
Advertisement

ಸೋಮವಾರ ಸಂಜೆ ಬೋಳಿಯಾರ್‌ ಕಡೆಯಿಂದ ಮುಡಿಪು ಕಡೆಗೆ ಇಬ್ಬರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಕುರ್ನಡು ಪಡೀಲ್‌ ಪೆಟ್ರೋಲ್‌ ಪಂಪ್‌ ಬಳಿ ಹಿಂಬದಿಯಿಂದ ಬಂದ ಪಿಕಪ್‌ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಗಾಯಗೊಂಡಿದ್ದರು.

ಮೃತ ಜುನೈದ್‌ ಕಲ್ಲಾಪು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರು. ಅರ್ಫಾಝ್‌ ಮುಂಬೈನಲ್ಲಿ ಕೆಲಸದಲ್ಲಿದ್ದು, ಊರಿಗೆ ಇತ್ತೀಚೆಗೆ ಬಂದಿದ್ದರು.

ಪಿಕಪ್‌ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿ ಚಾಲಕನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

 

Advertisement
div class="ere-sticky">