ಮಂಗಳವಾರ, 27 ಅಕ್ಟೋಬರ್ 2026
Trending

ಬ್ಲ್ಯಾಕ್ ಪಂಗಸ್‌ನಿಂದ ಮಹಿಳೆ ಸಾವು | ನಾಲ್ವರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ನಿವೃತ ಯೋಧ

ಬ್ಲ್ಯಾಕ್ ಪಂಗಸ್‌ನಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು ಮನನೊಂದ ಪತಿ ತನ್ನ ನಾಲ್ವರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮ ನಡೆದಿದೆ.

Sponsored

ನಿವೃತ್ತ ಯೋಧ ಗೋಪಾಲ ದೊಡ್ಡಪ್ಪ ಹಾದಿಮನಿ (46), ತನ್ನ ಮಕ್ಕಳಾದ ಸೌಮ್ಯ ಗೋಪಾಲ್ ಮಾದೇವಿ,(19) ಸ್ವಾತಿ ಗೋಪಾಲ ಹಾದಿಮನಿ,(16) ಸಾಕ್ಷಿ ಗೋಪಾಲ್ ಹಾದಿಮನಿ, (12) ಸೃಜನ್ ಗೋಪಾಲ್ ಹಾದಿಮನಿ (10) ಅವರಿಗೆ ವಿಷ ಹಾಕಿ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement
Advertisement

ಗೋಪಾಲ ದೊಡ್ಡಪ್ಪ ಹಾದಿಮನಿ ಅವರ ಪತ್ನಿ ಜಯಾ ಬ್ಲ್ಯಾಕ್ ಫಂಗಸ್ ಗೆ ಬಲಿಯಾಗಿದ್ದರು. ಇದೇ ನೋವಿನಲ್ಲಿ ಮನನೊಂದಿದ್ದ ಗೋಪಾಲ ದೊಡ್ಡಪ್ಪ ಹಾದಿಮನಿ ಖಿನ್ನತೆಗೆ ಒಳಗಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Advertisement