ಸೋಮವಾರ, 26 ಅಕ್ಟೋಬರ್ 2026
Trending

ಪುತ್ತೂರು: ನಕಲಿ ದಾಖಲೆ ಸೃಷ್ಟಿಸಿ ಜಾಗ ಕಬಳಿಕೆ ಯತ್ನ: ಶಿಕ್ಷೆ ಪ್ರಕಟ

Paper Leak Law

ಪುತ್ತೂರು: ಕೊಳ್ತಿಗೆಯಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ 4.71 ಎಕರೆ ಆಸ್ತಿ ಕಬಳಿಸಲು ಯತ್ನ ಮಾಡಿದ ಪ್ರಕರಣಕ್ಕೆ ಕುರಿತಂತೆ ಮಹಿಳಾ ಆರೋಪಿಗೆ ಪುತ್ತೂರು ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

Sponsored

ರುಕ್ಮಯ ಗೌಡ, ಶಿವರಾಮ ಗೌಡ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಮೃತಪಟ್ಟಿರುವುದರಿಂದ ಮಹಾಲಕ್ಷ್ಮಿ ಅವರಿಗೆ ಐಪಿಸಿ ಸೆಕ್ಷನ್‌ 419ರ ಅಡಿ 2 ವರ್ಷ ಜೈಲು ಶಿಕ್ಷೆ, 5 ಸಾವಿರ ರೂ.ದಂಡ, 468ರ ಅಡಿ 3 ವರ್ಷ ಜೈಲು ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

Advertisement
Advertisement

ಶೇಷಪ್ಪ ಗೌಡ ಎನ್ನುವವರಿಗೆ ಸೇರಿದ ಜಾಗವನ್ನು ನಕಲಿ ದಾಖಲೆ ಸೃಷ್ಟಿ ಮಾಡಿ ಒಳಗೆ ಹಾಕಲು ಸಂಚು ರೂಪಿಸಿದ್ದರು. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement