ಸೋಮವಾರ, 26 ಅಕ್ಟೋಬರ್ 2026
Trending

5 ರಿಂದ 17ವರ್ಷದ ಮಕ್ಕಳ ಆಧಾರ್‌ ಬಯೋಮೆಟ್ರಿಕ್ ನವೀಕರಣ – ಉಚಿತ ಸೇವೆ ಸೆಪ್ಟೆಂಬರ್ 30ರ ವರೆಗೆ ವಿಸ್ತರಣೆ!!

ಭಾರತೀಯ ಗುರುತು ಪ್ರಾಧಿಕಾರವು 5 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ನವೀಕರಣವನ್ನು ಉಚಿತವಾಗಿ ಮಾಡುವುದಾಗಿ ತಿಳಿಸಿದ್ದು, ಈ ಉಚಿತ ಸೇವೆಯು 2026ರ ಸೆಪ್ಟೆಂಬರ್ 30 ರವರೆಗೆ ಇರಲಿದೆ ಎಂದು (ಯುಐಡಿಎಐ) ತಿಳಿಸಿದೆ.

Sponsored

ಮಕ್ಕಳ ಬಯೋಮೆಟ್ರಿಕ್ ನವೀಕರಣಕ್ಕೆ ಹೆಚ್ಚುವರಿ ದಾಖಲೆಗಳ ಅಗತ್ಯವಿರುವುದಿಲ್ಲ. ಕೇವಲ ಮಗುವಿನ ಹಳೆಯ ಆಧಾರ್ ಕಾರ್ಡ್ ಇದ್ದರೆ ಸಾಕಾಗುತ್ತದೆ. ಇದರ ಜೊತೆಗೆ ಪೋಷಕರ ಆಧಾರ್ ಕಾರ್ಡ್ ಮತ್ತು ಮಗುವಿನ ವಯಸ್ಸಿನ ಪುರಾವೆಗಾಗಿ ಜನನ ಪ್ರಮಾಣ ಪತ್ರ ಇದ್ದರೆ ಒಳ್ಳೆಯದು.

ಉಚಿತ ಬಯೋಮೆಟ್ರಿಕ್ ನವೀಕರಣ ಸೌಲಭ್ಯವನ್ನು ಹತ್ತಿರದ ಆಧಾರ್ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ನವೀಕರಣಗೊಂಡ ಆಧಾರ್ ಕಾರ್ಡ್ ಸಿಗಲು 7 ರಿಂದ 30 ದಿನ ತೆಗೆದುಕೊಳ್ಳುತ್ತದೆ. ಆಧಾರ್ ನವೀಕರಣಗೊಂಡ ತಕ್ಷಣ, ನಿಮ್ಮ ಮೊಬೈಲ್ ಸಂಖ್ಯೆಗೆ SMS ಬರುತ್ತದೆ. ಆ ಬಳಿಕ ನೀವು myAadhaar ಪೋರ್ಟಲ್ ಮೂಲಕ ಡಿಜಿಟಲ್ ಇ-ಆಧಾರ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.