ಉಡುಪಿ: ಪೇಜಾವರ ಮಠದ ನೀಲಾವರ ಗೋಶಾಲೆಯ ಹೆಸರನ್ನು ದುರ್ಬಳಕೆ ಮಾಡಿ, ಅನಧಿಕೃತವಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದ ಗೋವರ್ಧನಗಿರಿ ಟ್ರಸ್ಟ್‌ನ ಸದಸ್ಯನನ್ನು ವಜಾ ಮಾಡಲಾಗಿದೆ. ಆರೋಪಿ ಶಶಿಧರ್ ಭಟ್ ನನ್ನು ಟ್ರಸ್ಟ್‌ನಿಂದ ಕೂಡಲೇ ವಜಾ ಮಾಡಲಾಗಿದೆ.
Sponsoredಉಡುಪಿ ಭಾರತೀಶ ಜ್ಯುವೆಲ್ಲರ್ಸ್‌ನ ಮಾಲೀಕ ಶಶಿಧರ್ ಭಟ್ ಎಂಬಾತ ನೀಲಾವರ ಗೋಗ್ರಾಸ ಸೇವಾ ತಂಡ ಎನ್ನುವ ಅನಧಿಕೃತ ಸಂಘಟನೆಯನ್ನು ರಚಿಸಿಕೊಂಡಿದ್ದ. ಪೇಜಾವರ ಸ್ವಾಮೀಜಿಯವರ ಭಾವಚಿತ್ರ ಹಾಗೂ ಮಠದ ಹೆಸರನ್ನು ಮನವಿ ಪತ್ರಗಳನ್ನು ಬಳಸಿ ಶ್ರೀಗಳ ಗಮನಕ್ಕೆ ತರದೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದ ಎಂದು ವರದಿಯಾಗಿದೆ.
ಟ್ರಸ್ಟ್ ಸ್ಪಷ್ಟನೆ
ಶಶಿಧರ್ ಭಟ್ ನಡೆಸಿರುವ ಈ ಚಟುವಟಿಕೆಗಳಿಗೂ ಪೇಜಾವರ ಮಠ ಅಥವಾ ನೀಲಾವರ ಗೋಶಾಲೆಗೂ ಯಾವುದೇ ಸಂಬಂಧವಿಲ್ಲ. ಆತ ರಚಿಸಿರುವ ತಂಡ ಸಂಪೂರ್ಣ ಅನಧಿಕೃತವಾಗಿದ್ದು, ಆತನನ್ನು ಟ್ರಸ್ಟ್‌ನಿಂದ ಉಚ್ಛಾಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಕ್ತರಲ್ಲಿ ಮನವಿ:
ಸಾರ್ವಜನಿಕರು ಹಾಗೂ ಗೋಭಕ್ತರು ಇಂತಹ ವ್ಯಕ್ತಿಗ ಮಾತು ಕೇಳಿ ಮೋಸ ಹೋಗಬಾರದು, ಗೋಶಾಲೆಗೆ ದೇಣಿಗೆ ನೀಡುವವರು ನೇರವಾಗಿ ಟ್ರಸ್ಟ್‌ನ ಅಧಿಕೃತ ರಶೀದಿಯನ್ನು ಪಡೆದೇ ಹಣ ನೀಡಬೇಕು ಎಂದು ಮನವಿ ಮಾಡಿದ್ದಾರೆ.





