ಭಾನುವಾರ, 25 ಅಕ್ಟೋಬರ್ 2026

ಆಸ್ಪತ್ರೆಯಲ್ಲಿ ರೋಗಿ ಬಳಿ ಇದ್ದ ಒಡವೆ ಬ್ಯಾಗ್‌ ಕದ್ದೊಯ್ದ ನಾಯಿ

Stray Dog

ನಾಯಿಯೊಂದು ಒಡವೆ ಬ್ಯಾಗ್‌ ಹೊತ್ತೊಯ್ದಿರುವ ಘಟನೆಯೊಂದು ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಮಹಿಳೆಯೊಬ್ಬರ ನಾಲ್ಕು ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ 2 ಸಾವಿರ ರೂ. ನಗದು ಇದ್ದ ಚೀಲವನ್ನು ಬೀದಿ ನಾಯಿಯೊಂದು ಆಹಾರವೆಂದು ಭಾವಿಸಿದ್ದು, ಬಾಯಲ್ಲಿ ಕಚ್ಚಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

Sponsored

ಕಾಯಂಪುರ ಗ್ರಾಮದ ನಿವಾಸಿ ಲತಾ ಬಾಯಿ ಎಂಬ ಮಹಿಳೆ ಆಸ್ಪತ್ರೆಯ ಜನರಲ್‌ ವಾರ್ಡ್‌ನಲ್ಲಿದ್ದ ಸಂದರ್ಭದಲ್ಲಿ ತಮ್ಮ ಆಭರಣದ ಬ್ಯಾಗ್‌ ನಾಪತ್ತೆಯಾಗಿರುವುದನ್ನು ಕಂಡು ಗಾಬರಿಗೊಂಡು ಕೊತ್ವಾಲಿ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದರು.

Marriage AdMarriage AdSponsored

ಮುಂಜಾನೆ ಸಮಯದಲ್ಲಿ ಬೀದಿ ನಾಯಿಯೊಂದು ವಾರ್ಡ್‌ನೊಳಗೆ ಬಂದು ಬ್ಯಾಗ್‌ ಅನ್ನು ಕಚ್ಚಿಕೊಂಡು ಆರಾಮವಾಗಿ ಹೊರನಡೆಯುತ್ತಿರುವ ದೃಶ್ಯ ಕಂಡಿದ್ದು, ಕೂಡಲೇ ಪೊಲೀಸರು ತಕ್ಷಣ ನಾಯಿ ತೆರಳಿದ ಮಾರ್ಗವನ್ನು ಶೋಧಿಸಿ, ಆಸ್ಪತ್ರೆಯ ಆವರಣದಲ್ಲಿದ್ದ ಬ್ಯಾಗ್‌ನ್ನು ಆಭರಣ ಮತ್ತು ನಗದಿನ ಜೊತೆ ಸುರಕ್ಷಿತವಾಗಿ ವಶಪಡಿಸಿದ್ದು ಮಹಿಳೆಗೆ ಮರಳಿಸಿದ್ದಾರೆ.