ಭಾನುವಾರ, 25 ಅಕ್ಟೋಬರ್ 2026

ಪುತ್ತೂರಲ್ಲಿ ಮತ್ತೊಂದು ಹೋರಾಟಕ್ಕೆ ಹಿಂದೂ ಸಂಘಟನೆಗಳು ಸಜ್ಜು – ಆಗಸ್ಟ್ 31ರಂದು ‘ಪುತ್ತೂರು ಚಲೋ’ಗೆ ಕರೆ!

ಪುತ್ತೂರಿನ ಡಿಜಿಟಲ್ ಸೇವಾ ಕೇಂದ್ರದಲ್ಲಿ ನಡೆದ ಗಲಾಟೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನಿನ್ನೆಯ ಸ್ವಯಂಪ್ರೇರಿತ ಬಂದ್ ಯಶಸ್ವಿಯಾದ ಬೆನ್ನಲ್ಲೇ ಹಿಂದೂ ಸಂಘಟನೆಗಳು ಮತ್ತೊಂದು ಬೃಹತ್ ಹೋರಾಟಕ್ಕೆ ಕರೆ ಕೊಟ್ಟಿವೆ. 

Sponsored

ಆಗಸ್ಟ್ 31ರ ಸೋಮವಾರದಂದು ಬೃಹತ್ ‘ಪುತ್ತೂರು ಚಲೋ’ ಪ್ರತಿಭಟನೆಗೆ ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಸೇರಿದಂತೆ ಸಂಘ ಪರಿವಾರ ಸಂಘಟನೆಗಳು ಜಂಟಿಯಾಗಿ ಕರೆ ನೀಡಿವೆ. 

Marriage AdMarriage AdSponsored

 ವಿಎಚ್‌ಪಿ ಮುಖಂಡರಾದ ಶರಣ್ ಪಂಪ್‌ವೆಲ್, ಪುನೀತ್ ಅತ್ತಾವರ ಸೇರಿದಂತೆ ಹಲವು ಪ್ರಮುಖ ಹಿಂದೂ ನಾಯಕರು ಪ್ರಕರಣದಲ್ಲಿ ಗಾಯಗೊಂಡಿರುವ ಅಂಜನಾ ಪೈ ಅವರ ಆರೋಗ್ಯವನ್ನುಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ತಮ್ಮ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಹಾಗೂ ಸೂಕ್ತ ಕ್ರಮ ಕೈಗೊಳ್ಳದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮುಖಂಡರು, ಆಗಸ್ಟ್ 31ರ ಸೋಮವಾರದಂದು ಪುತ್ತೂರಿನ ಎಲ್ಲಾ ಹಿಂದೂಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.