ಸೋಮವಾರ, 26 ಅಕ್ಟೋಬರ್ 2026
Trending

ಯುವತಿಗೆ ಗೊತ್ತಿಲ್ಲದೇ ಆನ್ಲೈನ್ ಅಲ್ಲಿ ರಿಜಿಸ್ಟರ್ಡ್ ಮ್ಯಾರೇಜ್ ಮಾಡಿದ ಹುಡುಗ!! ಮುಂದಾಗಿದ್ದೇನು?

ಆನ್‌ಲೈನ್‌ನಲ್ಲಿ ವಿವಾಹ ನೋಂದಣಿ ಸೌಲಭ್ಯ ಒಂದು ದುರುಪಯೋಗ ಆಗಿರುವುದು ಬೆಂಗಳೂರಲ್ಲಿ ಬೆಳಕಿಗೆ ಬಂದಿದ್ದು, ಖಾಸಗಿ ಕಂಪನಿಯ 34 ವರ್ಷದ ಯುವಕ, ತನ್ನ 24 ವರ್ಷದ ಉದ್ಯೋಗಿಯನ್ನು ಮದುವೆ ಆಗಿರುವುದಾಗಿ ದೇವನಹಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ಪ್ರಮಾಣ ಪತ್ರ ಪಡೆದಿದ್ದಾನೆ. ಆದರೆ ಇಲ್ಲಿ ಟ್ವಿಸ್ಟ್ ಏನೆಂದರೆ ಯುವತಿಗೆ ರಿಜಿಸ್ಟರ್ ಮ್ಯಾರೇಜ್ ಆಗಿರುವುದೇ ಗೊತ್ತಿಲ್ಲ.

Sponsored

 ಹುಡುಗನ ಮೋಸವನ್ನು ಅರಿತು ಪ್ರಮಾಣಪತ್ರವನ್ನು ಗಮನಿಸಿದ ಯುವತಿ, ಪೊಲೀಸ್ ಠಾಣೆ ಹಾಗೂ ಕೋರ್ಟ್‌ಗೆ ದೂರು ಸಲ್ಲಿಸಿದ್ದು, ಆರೋಪಿತ ಯುವಕ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಕೊನೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ದೇವನಹಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ನೀಡಲಾದ ವಿವಾಹ ಪ್ರಮಾಣ ಪತ್ರವನ್ನು ಅನೂರ್ಜಿತಗೊಳಿಸಿ ಆದೇಶ ಹೊರಡಿಸಿದೆ.

 

ಏನಿದು ಘಟನೆ?

ಯುವತಿ ಮತ್ತು ಯುವಕ ಸಹೋದ್ಯೋಗಿಗಳಾಗಿದ್ದು, ಆಪ್ತರಾಗಿದ್ದರು. ಹೀಗೆ ಆಪ್ತರಾಗಿದ್ದ ವೇಳೆ ಯುವಕನಿಗೆ ಯುವತಿ ಮೇಲೆ ಲವ್ ಆಗಿದೆ. ಕೊನೆಗೊಂದು ದಿನ ಆತ ಯುವತಿಯ ಬಳಿ ಮದುವೆಯ ಪ್ರಸ್ತಾಪವನ್ನು ಇಟ್ಟಿದ್ದಾನೆ. ಇದಕ್ಕೆ ಯುವತಿ ಆರಂಭದಲ್ಲಿ ನಿರಾಕರಿಸಿ ಬಳಿಕ ತನ್ನ ಪಾಲಕರು ಒಪ್ಪಿದರೇ ಮಾತ್ರ ಮದುವೆ ಆಗುವುದಾಗಿ ಹೇಳಿದ್ದಳು. ಆದರೆ, ಯುವತಿಯ ಪಾಲಕರು ಪ್ರೇಮ ವಿವಾಹಕ್ಕೆ ನಿರಾಕರಿಸಿದರು. ಆದರಿಂದ ಯುವತಿ, ತನ್ನ ಪಾಲಕರು ಮದುವೆಗೆ ಒಪ್ಪಿಗೆ ಸೂಚಿಸಿದ ಕಾರಣ ಆತನೊಂದಿಗೆ ವಿವಾಹವನ್ನು ನಿರಾಕರಿಸಿ ಸ್ನೇಹವನ್ನು ಕಡಿತ ಮಾಡಿಕೊಂಡಿದ್ದಳು.

ಕುಪಿತಗೊಂಡ ಯುವಕ, ಈ ಹಿಂದೆ ಯುವತಿ ಜತೆಗೆ ತೆಗೆಸಿಕೊಂಡಿದ್ದ ಛಾಯಾಚಿತ್ರಗಳನ್ನು ದುರುಪಯೋಗಪಡಿಸಿಕೊಂಡರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ್ದ. ಸಬ್ ರಿಜಿಸ್ಟ್ರಾರ್ ಸಹ ಮದುವೆ ಪ್ರಮಾಣಪತ್ರವನ್ನು ವಿತರಿಸಿದ್ದರು.

ಈ ವಿಚಾರ ಯುವತಿಗೆ ಗೊತ್ತಾಗಿ 2024ರ ಡಿಸೆಂಬರ್ 18ರಲ್ಲಿ ಯಾವುದೇ ವಿವಾಹ ಸಮಾರಂಭ ನಡೆದಿಲ್ಲ. ದೇವನಹಳ್ಳಿ ಸಬ್-ರಿಜಿಸ್ಟ್ರಾರ್ ನೀಡಿದ ವಿವಾಹ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಳು. ಅರ್ಜಿದಾರರು ವಿವಾಹ ಪ್ರಮಾಣಪತ್ರದ ಪ್ರಮಾಣೀಕೃತ ಪ್ರತಿ ಮತ್ತು ತನ್ನ ಛಾಯಾಚಿತ್ರಗಳ ದುರುಪಯೋಗ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು. ಈ ಬಗ್ಗೆ ಪೊಲೀಸರಿಂದ ಸ್ವೀಕೃತಿ ಪತ್ರವನ್ನು ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಳು. ಈ ಬಗ್ಗೆ ಆರೋಪಿತನಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದರೂ ಯಾವುದೇ ಸೂಕ್ತ ಸಾಕ್ಷಾೃಧಾರಗಳನ್ನು ಒದಗಿಸದ ಹಿನ್ನೆಲೆಯಲ್ಲಿ ವಿವಾಹ ಪ್ರಮಾಣ ಪತ್ರವನ್ನು ಅನೂರ್ಜಿತ ಎಂದು ನ್ಯಾಯಾಲಯ ಘೋಷಣೆ ಮಾಡಿದೆ.

 ಕೆಲವೊಮ್ಮೆ ಇಂತಹ ಸಂದರ್ಭದಲ್ಲಿ ಯುವತಿಯರು ಮರ್ಯಾದೆಗೆ ಅಂಜಿ ಪ್ರಾಣವನ್ನು ಕಳೆದುಕೊಳ್ಳುವ ಸಂದರ್ಭಗಳು ಉಂಟು. ಅಥವಾ ಹೀಗಾಯಿತಲ್ಲ.. ತನ್ನ ಬದುಕು ಮುಂದೆ ಏನಾಗುತ್ತದೆಯೋ ಎಂದು ಆತಂಕದಿಂದ ಇಷ್ಟವಿಲ್ಲದಿದ್ದರೂ ಮದುವೆಗೆ ಒಪ್ಪುವುದು ಇದೆ. ಆದರೆ ಇಂತಹ ಸಂದರ್ಭದಲ್ಲಿ ದೃತಿಗೆಡದ ಯುವತಿ ವಿವಾಹ ಪ್ರಮಾಣ ಪತ್ರವನ್ನು ಕೋರ್ಟ್ ನಲ್ಲಿ ರದ್ದು ಮಾಡಿ, ಜಾಣತನ ಮೆರೆದಿದ್ದಾಳೆ.