ಸೋಮವಾರ, 26 ಅಕ್ಟೋಬರ್ 2026
Trending

ಬೆಳ್ತಂಗಡಿ: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ

ಬೆಳ್ತಂಗಡಿ : ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಶ್ರೀನಿವಾಸ ನನ್ನು ಆಂಧ್ರಪ್ರದೇಶದ ಚಿತ್ತೂರು ಎಂಬಲ್ಲಿ ಬೆಳ್ತಂಗಡಿ ಪೊಲೀಸರು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು ನ್ಯಾಯಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Sponsored

ಬೆಳ್ತಂಗಡಿ ನ್ಯಾಯಾಲಯ CC No. 597/2017 CR NO. 169/2016. ಕಲಂ, 379, 201 ಐಪಿಸಿ. ಪ್ರಕರಣದಲ್ಲಿ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆ ಕವಲಗುಂಟ, ಪೆನಮೂರು ನಿವಾಸಿ ಶ್ರೀನಿವಾಸ ಎಂಬಾತನನ್ನು ಬೆಳ್ತಂಗಡಿ ಪೊಲೀಸ್ ಉಪ ಅಧಿಕ್ಷಕರು ರೋಹಿಣಿ ಸಿ ಕೆ, ಪೊಲೀಸ್ ವೃತ್ತ ನಿರೀಕ್ಷಕರು ರವಿ ಬಿ ಎಸ್, ಉಪ ನೀರಿಕ್ಷಕರು ಸಮರ್ಥ್ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ವ್ರಷಭ, ಚರಣ್ ರಾಜ್ ರವರು ಜೂ.30 ರಂದು ಆಂಧ್ರಪ್ರದೇಶದ ಚಿತ್ತೂರು ಎಂಬಲ್ಲಿಂದ ದಸ್ತಗಿರಿ ಮಾಡಿ ಜು. 01 ರಂದು ನ್ಯಾಯಾಧಿಶರ ಮುಂದೆ ಸಿಬ್ಬಂದಿಗಳಾದ ಮುತ್ತಪ್ಪ ಮತ್ತು ಪ್ರೇಮ್ ಕುಮಾರ್ ರ ಮುಖೇನ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಮಂಗಳೂರು ಜೈಲಿಗೆ ನೀಡಿರುತ್ತಾರೆ.

Advertisement