ಸೋಮವಾರ, 26 ಅಕ್ಟೋಬರ್ 2026
Trending

13 ರ ಬಾಲಕಿಗೆ ಏಳು ತಿಂಗಳ ಮಗು- ನ್ಯಾಯಾಲಯದಿಂದ ವಿಶಿಷ್ಟ ತೀರ್ಪು

ಕೇವಲ 13 ವರ್ಷದ ಬಾಲಕಿಗೆ  7 ತಿಂಗಳ ಮಗು ಇರುವುದು ತಿಳಿದುಬಂದಿದೆ. ಆದರೆ ಆ ಮಗುವನ್ನು ಕುಟುಂಬ ಕಲಹದಿಂದ ಗಂಡನ ಮನೆಯಲ್ಲೇ ಇರಿಸಿಕೊಳ್ಳಲಾಗಿತ್ತು. ಆದರೆ ಈಗ ಕೋರ್ಟ್ ಆ ಮಗುವನ್ನು ಬಾಲಕಿ ತಾಯಿಗೆ ಒಪ್ಪಿಸುವಂತೆ  ಆದೇಶ ನೀಡಿರುವ ಘಟನೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿದೆ.

Sponsored

ಗಂಡನ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಿದ್ದು, ಈ ವೇಳೆ ಬಾಲಕಿ ಮನೆಯಿಂದ ಹೊರ ಬಂದಿದ್ದಾಳೆ. ಹೀಗೆ ಬಂದಾಗ ಆಕೆಯ ಗಂಡ ಹಾಗೂ ಅತ್ತೆ ಮಗುವನ್ನು ತಮ್ಮಲ್ಲೇ ಇಟ್ಟುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಈ ಕುರಿತು ಬಾಲಕಿ ನ್ಯಾಯಾಲಯದ ಮೊರೆ ಹೋಗಿದ್ದು, ತನಿಖೆ ನಡೆಸಿದ ಪೊಲೀಸರು ಮಗುವನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದ ಢಾಕಾ ನ್ಯಾಯಾಲಯವು ಮಗುವಿನ ಹಿತದೃಷ್ಟಿಯಿಂದ ಹಾಗೂ ತಾಯಿಯ ಸಾಮೀಪ್ಯದ ಅಗತ್ಯವನ್ನು ಪರಿಗಣಿಸಿ, ಮಗುವಿನ ಪೋಷಣೆ ತಾಯಿಯ ಬಳಿಯೇ ಇರಬೇಕು ಎಂದು ಆದೇಶಿಸಿದೆ. ಸದ್ಯ ನ್ಯಾಯಾಲಯವು ಮಗುವನ್ನು ತಾಯಿಗೆ ಒಪ್ಪಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಬಾಲ್ಯ ವಿವಾಹ, ಬಾಲಕಿಯರ ಹಕ್ಕುಗಳು ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.