ಶನಿವಾರ, 24 ಅಕ್ಟೋಬರ್ 2026

7th Pay Commission : ಮೂಲ ವೇತನದಲ್ಲಿ ಹೆಚ್ಚಳ ! ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ

ಸದ್ಯ ಕೇಂದ್ರ ನೌಕರರಿಗೆ ಜನವರಿ ತಿಂಗಳ ಡಿಎ ಹೆಚ್ಚಳದ ಕುರಿತಂತೆ ಸರ್ಕಾರ ಈಗಾಗಲೇ ಘೋಷಣೆ ಮಾಡಿದ್ದು, ಇದರೊಂದಿಗೆ ನೌಕರರ ಮೂಲ ವೇತನ ಪರಿಷ್ಕರಣೆಯ ಚರ್ಚೆ ಆರಂಭವಾಗಿದೆ.

7th Pay Commission

7th Pay Commission : ಇನ್ನೇನು ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲಿದ್ದು, ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಹಣಕಾಸು ವರ್ಷವು ಉತ್ತಮವಾಗಿರಲಿದ್ದು, ಮುಂಬರುವ ವರ್ಷದಲ್ಲಿ ವೇತನ ಆಯೋಗವನ್ನು ರದ್ದುಪಡಿಸುವ ಮೂಲಕ ಹೊಸ ಸೂತ್ರವನ್ನು ಜಾರಿಗೆ ತರಲು ಕೂಡಾ ಸರ್ಕಾರ ಮುಂದಾಗಿದೆ. ಜೊತೆಗೆ ಮಾರ್ಚ್ ತಿಂಗಳ ವೇತನದೊಂದಿಗೆ ಹೆಚ್ಚಳವಾದ ಡಿಎ ಕೇಂದ್ರ ನೌಕರರ ಕೈ (7th Pay Commission) ಸೇರಲಿದೆ.

ಸದ್ಯ ಕೇಂದ್ರ ನೌಕರರಿಗೆ ಜನವರಿ ತಿಂಗಳ ಡಿಎ ಹೆಚ್ಚಳದ ಕುರಿತಂತೆ ಸರ್ಕಾರ ಈಗಾಗಲೇ ಘೋಷಣೆ ಮಾಡಿದ್ದು, ಇದರೊಂದಿಗೆ ನೌಕರರ ಮೂಲ ವೇತನ ಪರಿಷ್ಕರಣೆಯ ಚರ್ಚೆ ಆರಂಭವಾಗಿದೆ.

ಇನ್ನು ಫಿಟ್‌ಮೆಂಟ್ ಅಂಶದಲ್ಲಿ ಬದಲಾವಣೆ ಅಡಿಯಲ್ಲಿ, ಉದ್ಯೋಗಿಗಳ ಸಂಬಳದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗುವ ಸಾಧ್ಯತೆ ಇದ್ದು, ತಮ್ಮ ಫಿಟ್‌ಮೆಂಟ್ ಅಂಶವನ್ನು ಪರಿಷ್ಕರಿಸಬೇಕು ಎಂದು ಕೇಂದ್ರ ನೌಕರರು ಬಹಳ ದಿನಗಳಿಂದ ಆಗ್ರಹಿಸುತ್ತಿದ್ದಾರೆ.

ಅದಲ್ಲದೆ ಕೇಂದ್ರ ನೌಕರರ ಫಿಟ್‌ಮೆಂಟ್ ಅಂಶ ಬದಲಾವಣೆಗೆ ಸಂಬಂಧಿಸಿದಂತೆ ಎರಡು ವಾದಗಳಿದ್ದು, ಫಿಟ್‌ಮೆಂಟ್ ಅಂಶವನ್ನು ಈಗಿರುವ 2.57 ಪಟ್ಟಿನಿಂದ 3ಕ್ಕೆ ಏರಿಸಬೇಕು. ಹೀಗೆ ಮಾಡಿದರೆ ನೌಕರರ ಮೂಲ ವೇತನ ಸುಮಾರು 3000 ರೂ. ಹೆಚ್ಚಳವಾಗುತ್ತದೆ.

ಮತ್ತೊಂದು ವಾದದ ಪ್ರಕಾರ 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಫಿಟ್‌ಮೆಂಟ್ ಅಂಶವು 3.68 ರಷ್ಟು ಏರಿಸುವುದು. ಹೀಗಾದಾಗ ನೌಕರರ ವೇತನದಲ್ಲಿ ಸುಮಾರು 8000 ರೂಪಾಯಿ ಹೆಚ್ಚಳವಾಗಲಿದೆ.

ಸದ್ಯ ಕೇಂದ್ರ ನೌಕರರ ಕನಿಷ್ಠ ವೇತನ 18,000 ರೂ. ಫಿಟ್ಎಂದಾದರೆ ‌ಮೆಂಟ್ ಅಂಶದ ನಿರ್ಧಾರದ ನಂತರ ಅದು 26,000 ರೂ.ಗೆ ಏರಿಕೆಯಾಗಲಿದೆ. ಆದರೆ, ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಪ್ರಸ್ತುತ ಇರುವ 2.57 ಪಟ್ಟು ಫಿಟ್‌ಮೆಂಟ್ ಅಂಶದ ಆಧಾರದ ವೇತನ ಲೆಕ್ಕ ಹಾಕಿದರೆ ಇತರ ಭತ್ಯೆಗಳನ್ನು ಹೊರತುಪಡಿಸಿ, 18,000 X 2.57 = 46260 ರೂ. ಆದರೆ ಅದನ್ನು 3.68ಕ್ಕೆ ಹೆಚ್ಚಿಸಿದರೆ, ಇತರ ಭತ್ಯೆಗಳನ್ನು ಹೊರತುಪಡಿಸಿ, ನೌಕರರ ವೇತನವು 26000 X 3.68 = 95680ರೂ. ಆಗಲಿದೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಹಣಕಾಸು ವರ್ಷವು ಉತ್ತಮವಾಗಿರಲಿದ್ದು, ಮುಂಬರುವ ವರ್ಷದಲ್ಲಿ ವೇತನ ಆಯೋಗವನ್ನು ರದ್ದುಪಡಿಸುವ ಮೂಲಕ ಹೊಸ ಸೂತ್ರವನ್ನು ಜಾರಿಗೆ ತರಲು ಕೂಡಾ ಸರ್ಕಾರ ಮುಂದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ