ಶನಿವಾರ, 24 ಅಕ್ಟೋಬರ್ 2026

Kerala: ಸರಣಿ ಅಪಘಾತ; ಕೇರಳ ಸಿಎಂ ಕಾರು ಜಖಂ, ಅಪಾಯದಿಂದ ಜಸ್ಟ್‌ ಮಿಸ್‌ ಸಿಎಂ, ವಿಡಿಯೋ ವೈರಲ್‌

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಪ್ರಯಾಣ ಮಾಡುತ್ತಿದ್ದ ಬೆಂಗಾವಲು ವಾಹನಗಳ ಸರಣಿ ಅಪಘಾತ ಸಂಭವಿದ ಘಟನೆಯೊಂದು ಸೋಮವಾರ ಸಂಜೆ 6.30 ಕ್ಕೆ ನಡೆದಿದೆ.

Tiruvananthapuram: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಪ್ರಯಾಣ ಮಾಡುತ್ತಿದ್ದ ಬೆಂಗಾವಲು ವಾಹನಗಳ ಸರಣಿ ಅಪಘಾತ ಸಂಭವಿದ ಘಟನೆಯೊಂದು ಸೋಮವಾರ ಸಂಜೆ 6.30 ಕ್ಕೆ ನಡೆದಿದೆ.

ಈ ಘಟನೆಯಲ್ಲಿ ಸಿಎಂ ಸೇರಿ ಬೆಂಗಾವಲು ವಾಹನದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ಕೇರಳ ಸಿಎಂ ಅವರು ಕೊಟ್ಟಾಯಂಗೆ ಭೇಟಿ ನೀಡಿ ವಾಪಾಸ್ಸಾಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿದ್ದು, ಈ ವೇಳೆ ಅದನ್ನು ತಪ್ಪಿಸಲೆಂದು ಹೋಗಿ ಬ್ರೇಕ್‌ ಹಾಕಲಾಗಿದೆ. ಪರಿಣಾಮ ಸಿಎಂ ವಾಹನಕ್ಕೆ ಬೆಂಗಾವಲು ವಾಹನ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ವಾಹನಗಳು ಅಲ್ಪ ಸ್ವಲ್ಪ ಜಖಂಗೊಂಡಿದೆ.

ನಂತರ ಸಿಎಂ ಅವರನ್ನು ಬೇರೆ ವಾಹನದ ಮೂಲಕ ಕಳುಹಿಸಿಕೊಡಲಾಗಿದೆ. ಅಪಘಾತದ ದೃಶ್ಯ ಸಿಸಿ ಕೆಮಾರದಲ್ಲಿ ಸೆರೆಯಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ