ಶುಕ್ರವಾರ, 30 ಅಕ್ಟೋಬರ್ 2026
Trending

ನಂದಿನಿ ಹಾಲಿನ ಲೀಟರ್‌ಗೆ ರೂ.8 ಹೆಚ್ಚಳ: ಯಾವ ಪ್ಯಾಕೆಟ್‌ ಹಾಲಿಗೆ ಎಷ್ಟು ದರ?

Nandini Milk Price
Advertisement
Advertisement

ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ನ.1 ರ ಕನ್ನಡ ರಾಜ್ಯೋತ್ಸವದ ದಿನವೇ ಬೆಲೆ ಏರಿಕೆ ಬಿಸಿ ತಟ್ಟಲಿದ್ದು, ಕೆಎಂಎಫ್‌ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಭರ್ಜರಿ 8 ರೂ. ಹೆಚ್ಚಿಸಿದೆ.

Sponsored

ಗ್ರಾಹಕರಿಂದ ಪಡೆಯುವ ಹೆಚ್ಚುವರಿ 8 ರೂಪಾಯಿಯಲ್ಲಿ 7 ರೂಪಾಯಿಯನ್ನು ನೇರವಾಗಿ ರೈತರಿಗೆ ನೀಡಲು ರಾಜ್ಯದ 16 ಹಾಲು ಒಕ್ಕೂಟಗಳು ನಿರ್ಧಾರ ಮಾಡಿದೆ.

Advertisement
Advertisement

ಹೊಸ ದರ ಜಾರಿಯಾದ ಬಳಿಕ ರೈತರಿಗೆ ಪ್ರತೀ ಲೀಟರ್ ಹಾಲಿಗೆ ಸಿಗುವ ದರದಲ್ಲಿ ಗಣನೀಯ ಏರಿಕೆಯಾಗಲಿದೆ. ದಕ್ಷಿಣ ಕನ್ನಡ ಹಾಲು ಒಕ್ಕೂಟ (ಡಿಕೆಎಂಯುಎಲ್‌) ಅತಿ ಹೆಚ್ಚು ಅಂದರೆ 47.10 ರೂ. (ಪ್ರಸ್ತುತ 40.10 ರೂ.) ನೀಡಲಿದೆ. ಅದೇ ರೀತಿ ಬೆಂಗಳೂರು ಹಾಲು ಒಕ್ಕೂಟ (ಬಿಎಎಂಯುಎಲ್‌) 43.15 ರೂ. (ಪ್ರಸ್ತುತ 36.15 ರೂ.), ಮೈಸೂರು ಒಕ್ಕೂಟ (ಎಂವೈಎಂಯುಎಲ್‌) 43.10 ರೂ., ತುಮಕೂರು (ಟಿಯುಎಂಯುಎಲ್‌) 43 ರೂ., ಚಿಕ್ಕಬಳ್ಳಾಪುರ (ಸಿಎಚ್‌ಐಎಂಯುಎಲ್‌) 42.40 ರೂ., ಕೋಲಾರ (ಕೆಓಎಂಯುಎಲ್‌) 42.20 ರೂ., ಮಂಡ್ಯ (ಎಂಎಎನ್‌ಎಂಯುಎಲ್‌) 42.30 ರೂ. ದರವನ್ನು ರೈತರಿಗೆ ಪಾವತಿ ಮಾಡಲಿದೆ.

Advertisement

ಉಳಿದಂತೆ ಚಾಮರಾಜನಗರ 42.20 ರೂ., ಧಾರವಾಡ 42 ರೂ., ಹಾಸನ ಮತ್ತು ಹಾವೇರಿ ತಲಾ 41.50 ರೂ., ಕಲಬುರಗಿ-ಬೀದರ್-ಯಾದಗಿರಿ 41.41 ರೂ., ಶಿವಮೊಗ್ಗ 41.21 ರೂ., ರಾಯಚೂರು-ಬಳ್ಳಾರಿ-ಕೊಪ್ಪಳ 41.10 ರೂ., ಬೆಳಗಾವಿ 41 ರೂ. ಹಾಗೂ ವಿಜಯಪುರ ಒಕ್ಕೂಟ 40.40 ರೂ. ನಂತೆ ರೈತರಿಗೆ ಹಣ ನೀಡಲಿವೆ. ಒಟ್ಟಾರೆಯಾಗಿ ರಾಜ್ಯದ ಹಾಲು ಉತ್ಪಾದಕ ರೈತರಿಗೆ ಸರಾಸರಿ 42.24 ರೂ. ಸಿಗಲಿದ್ದು, ಇದರ ಜೊತೆಗೆ ರಾಜ್ಯ ಸರ್ಕಾರ ನೀಡುವ 5 ರೂ. ಪ್ರೋತ್ಸಾಹ ಧನವೂ ನೇರವಾಗಿ ಅವರ ಖಾತೆಗೆ ಸೇರಿಕೊಳ್ಳಲಿದೆ.

Advertisement
Advertisement