ಈ ಡಿಜಿಟಲ್ ಯುಗದಲ್ಲಿ ಟೆಕ್ನಾಲಜಿ ಮುಂದುವರೆಯುತ್ತಲೇ ಇದೆ. ಇದೀಗ ಜಪಾನ್ ದೇಶ ಹೊಸ ಟೆಕ್ನಾಲಜಿಯೊಂದನ್ನು ವಿಶ್ವಕ್ಕೆ ಪರಿಚಯಿಸಿದ.
ರೈಲ್ವೆ ಹಳಿ ಮತ್ತು ರಸ್ತೆ ಮೇಲೆ ಚಲಿಸಬಲ್ಲಂತಹ ವಿಶ್ವದ ಮೊದಲ ದ್ವಿ ಮಾದರಿಯ ವಾಹನವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿಗೆ ಜಪಾನ್ ಪಾತ್ರವಾಗಿದೆ.
Sponsoredಈ ವಾಹನ ನೋಡಲು ಮಿನಿಬಸ್ ನಂತೆ ಕಾಣುತ್ತದೆ. ಹಾಗೆಯೇ ರಸ್ತೆ ಮೇಲೆ ಸಾಮಾನ್ಯ ರಬ್ಬರ್ ಟೈರ್ಗಳಲ್ಲಿ ಚಲಿಸುತ್ತದೆ. ಈ ವಾಹನ ಕೆಳಭಾಗದಲ್ಲಿ ಉಕ್ಕಿನ ಚಕ್ರಗಳನ್ನು ಹೊಂದಿದ್ದು, ಅದು ರೈಲು ಹಳಿಗಳನ್ನು ಸ್ಪರ್ಶಿಸಿದಾಗ ಇಳಿಯುತ್ತದೆ. ಇದೇ ಈ ವಾಹನದ ವೈಶಿಷ್ಟ್ಯವಾಗಿದೆ. ಹಾಗೆಯೇ ಇದರ ಮುಂಭಾಗದ ಟೈರ್ಗಳನ್ನು ಹಳಿಯಿಂದ ಮೇಲಕ್ಕೆತ್ತಲಾಗುತ್ತದೆ. ಹಿಂದಿನ ಚಕ್ರಗಳು ಡಿಎಂವಿ ವಾಹನವನ್ನು ರೈಲುಮಾರ್ಗಕ್ಕೆ ಮುಂದೂಡಲು ಕೆಳಗಡೆ ಇರುತ್ತವೆ. ರೈಲು ಹಳಿಯಲ್ಲಿ ಸುಲಭವಾಗಿ ರೈಲಿನಂತಹ ಮಾಡ್ಯೂಲ್ ಆಗಿ ಪರಿಣಾಮಕಾರಿಯಾಗಿ ಬದಲಾಗುವ ಈ ವೈಶಿಷ್ಟ್ಯವು ವಿಶೇಷವಾಗಿದೆ.
ವರದಿಗಳ ಪ್ರಕಾರ, ಈ ವಾಹನ ಸುಮಾರು 21 ಪ್ರಯಾಣಿಕರನ್ನು ಕರೆದೊಯ್ಯಲಿದ್ದು, ಹಳಿ ಮೇಲೆ ಗಂಟೆಗೆ 60 ಕಿ.ಮೀ ವೇಗದಲ್ಲಿ, ಸಾರ್ವಜನಿಕ ರಸ್ತೆ ಮೇಲೆ ಗಂಟೆಗೆ ಸುಮಾರು 100 ಕಿ.ಮೀ ವೇಗದಲ್ಲಿ ಚಲಿಸಲಿದೆ.
ಸಣ್ಣ ಪಟ್ಟಣಗಳಿಗೆ ಈ ವಾಹನಗಳು ನೆರವಾಗಲಿವೆ ಎಂದು ಎಎಸ್ ಎ ಕೋಸ್ಟ್ ರೈಲ್ವೆ ಕಂಪನಿಯ ಸಿಇಒ ಹೇಳಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಡೀಸೆಲ್ ನಿಂದ ಚಲಿಸುವ ಈ ವಾಹನಗಳು ವಿವಿಧ ಬಣ್ಣಗಳಲ್ಲಿ ಬಂದಿವೆ. ಇದು ಅನೇಕ ಸಣ್ಣ ಪಟ್ಟಣಗಳನ್ನು ಸಂಪರ್ಕಿಸುವ ಮೂಲಕ ಆಕರ್ಷಕ ಕಡಲ ತೀರದ ಪ್ರದೇಶಗಳನ್ನು ನೋಡಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಿವೆ.




