ಭಾನುವಾರ, 25 ಅಕ್ಟೋಬರ್ 2026

Puttur: ನಗರಸಭೆಯ 2 ಸ್ಥಾನಗಳ ಉಪಚುನಾವಣೆ -ಕಾಂಗ್ರೆಸ್ ,ಬಿಜೆಪಿ ತಲಾ 1 ರಲ್ಲಿ ಗೆಲುವು

Puttur: ನಗರ ಸಭಾ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ಉಪಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟಗೊಂಡಿದೆ.ಬಹಳ ಕೂತೂಹಲ ಮೂಡಿಸಿರುವ ನಗರಸಭಾ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ವಾರ್ಡ್-11ರಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ರೈ ಗೆಲುವಿನ ನಗೆ ಬೀರಿದ್ದಾರೆ. ಅದೇ ರೀತಿ ವಾರ್ಡ್-1ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಶೇವಿರೆ ಜಯಗಳಿಸಿದ್ದಾರೆ.

Sponsored

2 ಕಡೆಯಲ್ಲೂ 3 ಅಭ್ಯರ್ಥಿಗಳ ನಡುವೆಯೂ ತೀವ್ರ ಪೈಪೋಟಿ ಇದ್ದು, ರಮೇಶ್ ರೈ ಹಾಗೂ ದಿನೇಶ್ ಶೇವಿರೆ ಅವರು ಜಯಗಳಿಸಿದ್ದಾರೆ.

Marriage AdMarriage AdSponsored

ನಗರ ಸಭೆಯ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವರಾಮ ಸಪಲ್ಯ ಹಾಗೂ ವಾರ್ಡ್ 11ರಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಶಕ್ತಿ ಸಿನ್ಹಾ ರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ವಾರ್ಡ್ 11 ರಲ್ಲಿ ಚಲಾವಣೆಯಾದ ಒಟ್ಟು 1053 ಮತಗಳಲ್ಲಿ ಬಿಜೆಪಿಯ ರಮೇಶ್ ರೈ 431, ಕಾಂಗ್ರೆಸ್ ನ ದಾಮೋದರ ಭಂಡಾರ್ ಕರ್ 400, ಪುತ್ತಿಲ ಪರಿವಾರದ ಚಿಂತನ್ 216 ಮತಗಳನ್ನು ಪಡೆದುಕೊಂಡಿದ್ದಾರೆ. 6 ಮತ ನೋಟಕ್ಕೆ ಚಲಾವಣೆಯಾಗಿದೆ. ಬಿಜೆಪಿ ರಮೇಶ್ ರೈ 31 ಮತಗಳ ಅಂತದಲ್ಲಿ ಜಯ ಗಳಿಸಿದ್ದಾರೆ.

ಇದನ್ನೂ ಓದಿ: ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ, ಜ.1 ರಿಂದ ಜಾರಿ- ಸರಕಾರದಿಂದ ಆದೇಶ!!!

ವಾರ್ಡ್ 1ರಲ್ಲಿ ಚಲಾವಣೆಯಾದ ಒಟ್ಟು 958 ಮತಗಳಲ್ಲಿ ಕಾಂಗ್ರೆಸ್ ನ ದಿನೇಶ್ ಶೇವಿರೆ 427, ಬಿಜೆಪಿಯ ಸುನೀತಾ 219 ಹಾಗೂ ಪುತ್ತಿಲ ಪರಿವಾರದ ಅನ್ನಪೂರ್ಣ 308 ಮತಗಳನ್ನು ಪಡೆದುಕೊಂಡಿದ್ದಾರೆ. 4 ಮತ ನೋಟಕ್ಕೆ ಚಲಾವಣೆಯಾಗಿದೆ. ಕಾಂಗ್ರೆಸ್ ನ ದಿನೇಶ್ ಶೇವಿರೆ 119 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

Comments are closed.