ಸೋಮವಾರ, 26 ಅಕ್ಟೋಬರ್ 2026
Trending

Cylinder Weight: ಸಿಲಿಂಡರ್ 14.2 ಕೆಜಿ ತೂಕವೇ ಇರೋದೇಕೆ? ಹೆಚ್ಚು, ಕಮ್ಮಿ ಯಾಕಿಲ್ಲ?

Cylinder Weight : ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಕಾರ್ಮೋಡದಿಂದಾಗಿ ಪ್ರಪಂಚದಾದ್ಯಂತ ಎಲ್ ಪಿ ಜಿ ಸಿಲಿಂಡರ್ ಅಭಾವ ಉಂಟಾಗಿದೆ. ಇದರ ಬೆನ್ನಲ್ಲೇ ಎಲ್ ಪಿ ಜಿ ಕುರಿತಾದ ಕೆಲವು ವಿಶೇಷವಾದ ಹಾಗೂ ಕುತೂಹಲಕಾರಿ ವಿಚಾರಗಳು ತಿಳಿದುಬರುತ್ತಿವೆ. ಅಂತೆಯೇ ಇದೀಗ ಎಲ್ಲರ ಮನಸ್ಸಿನಲ್ಲಿ ಮೂಡುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ, ಈ ಗ್ಯಾಸ್ ಸಿಲಿಂಡರ್ ಮೇಲೆ ‘14.2 KG’ ಅಂತಲೇ ಏಕಿದೆ? ಎಂದು. ಅದಕ್ಕೆ ಇಲ್ಲಿದೆ ನೋಡಿ ಉತ್ತರ.

Sponsored

14.2 ಕೆಜಿ ಎಂಬುದು ಕಡ್ಡಾಯವೇ?

Advertisement
Advertisement

ನಿಜ ಹೇಳಬೇಕೆಂದರೆ, ಸಿಲಿಂಡರ್ ತೂಕ 14.2 ಕೆಜಿ ಇರಲೇಬೇಕು ಎಂಬ ಕಟ್ಟುನಿಟ್ಟಿನ ನಿಯಮವೇನೂ ಇಲ್ಲ. ಸಾಮಾನ್ಯ ಜನರು ಸಿಲಿಂಡರ್ ಅನ್ನು ಸುಲಭವಾಗಿ ಬಳಸಬೇಕು, ಸಾಗಾಟ ಮಾಡಬೇಕು ಮತ್ತು ಅದು ಗ್ರಾಹಕರ ಜೇಬಿಗೆ ಹೊರೆಯಾಗಬಾರದು ಎಂಬುದು ಇದರ ಹಿಂದಿನ ಉದ್ದೇಶ. ಈ ನಿರ್ಧಾರವನ್ನು ಯಾವಾಗ ಬೇಕಾದರೂ ಬದಲಿಸಬಹುದು. 

14.2 ಕೆಜಿ ಯಾಕೆ ಮಾಡಲಾಯಿತು !

ಭಾರತದಲ್ಲಿ ಮನೆಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬಳಕೆ ಆರಂಭವಾಗಿದ್ದು 1950ರ ದಶಕದಲ್ಲಿ. ಆ ಸಮಯದಲ್ಲಿ ‘ಬರ್ಮಾ ಶೆಲ್’ (Burmah Shell) ಎಂಬ ವಿದೇಶಿ ಕಂಪನಿಯು ಅಡುಗೆ ಅನಿಲವನ್ನು ಪೂರೈಸುತ್ತಿತ್ತು. ಈ ಕಂಪನಿಯೇ ಮೊದಲ ಬಾರಿಗೆ ಸಿಲಿಂಡರ್‌ನ ಗಾತ್ರ ಮತ್ತು ತೂಕವನ್ನು ನಿರ್ಧರಿಸಿತ್ತು. ನಂತರ ಇದೇ ಕಂಪನಿಯು ಮರುನಾಮಕರಣಗೊಂಡು ಇಂದಿನ ಭಾರತ್ ಪೆಟ್ರೋಲಿಯಂ (BPCL) ಆಗಿ ಬದಲಾಯಿತು.

ಮೂರು ಪ್ರಮುಖ ಕಾರಣಗಳು: 

1. 4.2 ಕೆಜಿ ಅನಿಲದ ಜೊತೆಗೆ ಲೋಹದ ಖಾಲಿ ಟ್ಯಾಂಕ್‌ನ ತೂಕ ಸೇರಿ ಒಟ್ಟು ಸುಮಾರು 29 ರಿಂದ 30 ಕೆಜಿ ತೂಕವಾಗುತ್ತದೆ. ಅಂದಿನ ಸರ್ವೆಯ ಪ್ರಕಾರ, ಒಬ್ಬ ಸಾಮಾನ್ಯ ಮನುಷ್ಯ ಸುಲಭವಾಗಿ ಎತ್ತಿ ಸಾಗಿಸಬಲ್ಲ ಗರಿಷ್ಠ ತೂಕವಿದು. ಹೆಚ್ಚಿದ್ದರೆ ಕಷ್ಟವಾಗುತ್ತಿತ್ತು.

2.  ಸಂಶೋಧನೆ ಮತ್ತು ತಜ್ಞರ ಅಂದಾಜಿನ ಪ್ರಕಾರ, ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬಕ್ಕೆ ತಿಂಗಳಿಗೆ ಎಷ್ಟು ಗ್ಯಾಸ್ ಬೇಕಾಗಬಹುದು ಎಂದು ಲೆಕ್ಕ ಹಾಕಲಾಗಿತ್ತು. 14.2 ಕೆಜಿ ಗ್ಯಾಸ್ ಸುಮಾರು 30 ರಿಂದ 45 ದಿನಗಳವರೆಗೆ (ಅಂದರೆ ಒಂದು ಅಥವಾ ಒಂದೂವರೆ ತಿಂಗಳು) ಬರುತ್ತದೆ ಎಂದು ಕಂಡುಬಂದಿತ್ತು. 

3.  ಒಂದು ಕುಟುಂಬಕ್ಕೆ ಸಿಲಿಂಡರ್ ಒಂದು ತಿಂಗಳು ಬರುತ್ತದೆ ಎಂದು ತಿಳಿದ ಮೇಲೆ, ಗ್ಯಾಸ್ ಏಜೆನ್ಸಿಗಳಿಗೆ ಪೂರೈಕೆಯ ಲೆಕ್ಕಾಚಾರ ಹಾಕುವುದು ಸುಲಭವಾಯಿತು. ಹೊಸ ಸಿಲಿಂಡರ್ ಬುಕ್ಕಿಂಗ್ ಮತ್ತು ಡೆಲಿವರಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಈ ‘ಮಾಡೆಲ್’ ತುಂಬಾ ಯಶಸ್ವಿಯಾಯಿತು.

Advertisement