ಶನಿವಾರ, 24 ಅಕ್ಟೋಬರ್ 2026

Vijay Raghavendra: ಅಮ್ಮ ಇಲ್ಲ ಅನ್ನೋ ಕೊರಗು, ಆದ್ರೂ ಅಪ್ಪ ವಿಜಯ್ ರಾಘವೇಂದ್ರಗೆ ‘ಮದುವೆ’ ನೆನಪಿಸಿದ ಪುತ್ರ !!

Vijay Raghavendra: ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಮದುವೆಯ ಆನಿವರ್ಸಿ ಕೂಡ ಎದುರಾಗಿದೆ. ಹೀಗಾಗಿ ಅವರ ಪುತ್ರ ಶೌರ್ಯ(Showrya) ಅಮ್ಮನಿಲ್ಲದಿದ್ದರೂ ಅಪ್ಪನಿಗೆ ಮದುವೆ ವಾರ್ಷಿಕೋತ್ಸವದ ಕೇಕ್ ತಂದುಕೊಟ್ಟು ಕತ್ತರಿಸುವಂತೆ ಹೇಳಿದ್ದಾರೆ.

Vijay Raghavendra

Vijay Raghavendra: ಚಂದನವನದಲ್ಲಿ ಕೆಲವು ನಾಯಕ ನಟರೆಂದರೆ ಪ್ರತಿಯೊಬ್ಬ ಹೀರೋಗಳ ಅಭಿಮಾನಿಗಳಿಗೂ ಇಷ್ಟ ಆಗುವಂತವರಿದ್ದಾರೆ. ಅಂಥವರ ಸಾಲಿನಲ್ಲಿ ಮೊದಲಿಗೆ ನಿಲ್ಲುವವರೆಂದರೆ ಚಿನ್ನಾರಿ ಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ(Vijay raghavendra)ರವರು. ಅರ್ಧಾಂಗಿ ಇಲ್ಲ ಎಂಬ ಕೊರಗಿದ್ದರೂ ಆ ನೋವನ್ನು ಮರೆಯಲು, ಅಭಿಮಾನಿಗಳನ್ನು ರಂಜಿಸಲು ಅವರು ತುಂಬಾ ಪ್ರಯತ್ನಪಡುತ್ತಿದ್ದಾರೆ. ಈ ಬೆನ್ನಲ್ಲೇ ಮಗ ಕೂಡ ವಿಜಯ್ ರಾಘವೇಂದ್ರ ಅವರಿಗೆ ಸರ್ಪ್ರೈಸ್ ಕೊಟ್ಟಿದ್ದಾನೆ.

ಹೌದು, ವಿಜಯ್ ರಾಘವೇಂದ್ರ(Vijay Raghavendra) ಅವರು ಹೆಂಡತಿ ಸ್ಪಂದನಾ(Spandana)ಳನ್ನು ಕಳೆದುಕೊಂಡು ಒಂದು ವರ್ಷವಾಗಿದೆ. ಈ ಬೆನ್ನಲ್ಲೇ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಮದುವೆಯ ಆನಿವರ್ಸಿ ಕೂಡ ಎದುರಾಗಿದೆ. ಹೀಗಾಗಿ ಅವರ ಪುತ್ರ ಶೌರ್ಯ(Showrya) ಅಮ್ಮನಿಲ್ಲದಿದ್ದರೂ ಅಪ್ಪನಿಗೆ ಮದುವೆ ವಾರ್ಷಿಕೋತ್ಸವದ ಕೇಕ್ ತಂದುಕೊಟ್ಟು ಕತ್ತರಿಸುವಂತೆ ಹೇಳಿದ್ದಾರೆ. ಇದು ಮಾತ್ರ ಎಂಥಹ ಕಲ್ಲು ಹೃದಯವದರಿಗೂ ಕಣ್ಣೀರು ಬರುವಂತೆ ಮಾಡುತ್ತದೆ.

ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಅವರ ಮದುವೆ ವಾರ್ಷಿಕೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಆಕೆ ಸಾವನ್ನಪ್ಪಿದ್ದು, ಕುಟುಂಬದಲ್ಲಿ ಭಾರಿ ದುಃಖಕ್ಕೆ ಕಾರಣವಾಗಿತ್ತು. ಇನ್ನು ಕಳೆದೆರಡು ದಿನಗಳ ಹಿಂದೆ ಆ.26ರಂದು ನಟ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಅವರ 18ನೇ ವಿವಾಹ ವಾರ್ಷಿಕೋತ್ಸವ ಇತ್ತು. ನಮ್ಮ ಮದುವೆಯಾಗಿ ‘ಇಂದಿಗೆ ಹದಿನೇಳು ವರ್ಷಗಳು… Happy Wedding Anniversary to us ಚಿನ್ನ’ ಎಂದು ಭಾವನಾತ್ಮಕವಾಗಿ ಬರೆದುಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ದಂಪತಿಯ ಏಕೈಕ ಪುತ್ರ ಶೌರ್ಯನಿಗೆ ತನ್ನ ಅಮ್ಮನಿಲ್ಲ ಎಂಬ ಸತ್ಯ ಗೊತ್ತಿದೆ. ಆದರೂ, ಪ್ರತಿ ವರ್ಷ ಅಪ್ಪ-ಅಮ್ಮ ಆ.26ರಂದು ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳುತ್ತಿದ್ದ ದಿನವನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದನು. ಅಮ್ಮ ಜೊತೆಗಿಲ್ಲ ಎಂಬ ಅರುವಿದ್ದರೂ ನನಗೆ ಅಪ್ಪನಿರುವನಲ್ಲ, ಅವರಿಗೆ ವಿವಾಹ ವಾರ್ಷಿಕೋತ್ಸವ ಶುಭಾಶಯ ಕೋರೋಣ ಎಂದು ಒಂದು ಕೇಕ್ ಮಾಡಿಸಿಕೊಂಡು ಬಂದು ಅಪ್ಪ ವಿಜಯ್ ರಾಘವೇಂದ್ರನ ಮುಂದಿಡುತ್ತಾನೆ. ಕೇಕಿನ ಮೇಲೆ ಹ್ಯಾಪಿ ಆನಿವರ್ಸರಿ ಎಂಬ ಸ್ಟಿಕರ್ ಕೂಡ ಇದೆ. ಇದನ್ನು ನೋಡಿದ ವಿಜಯ್ ಒಂದು ಕ್ಷಣ ಭಾವುಕರಾದರೂ ಅದನ್ನು ಮಗನ ಮುಂದೆ ತೋರಿಸಿಕೊಳ್ಳದೇ ಕಣ್ಣಲ್ಲಿಯೇ ಕಣ್ಣೀರನ್ನು ಅದುಮಿಟ್ಟುಕೊಂಡು ಮಗ ಸಂತೋಷದಲ್ಲಿ ಬೆರೆಯುತ್ತಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ